ಕಳ್ಳತನ ಪ್ರಕರಣ ತಡೆಯಲು ಪೊಲೀಸರಿಗೆ ಸಹಕರಿಸಿ : ಪಿಎಸೈ ಉಮಾದೇವಿಗೌಡನಿಪ್ಪಾಣಿ ಹಾಗೂ ಗ್ರಾಮಾಂತರ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಕೆಲ ದಿನಗಳಿಂದ ದ್ವಿಚಕ್ರ ವಾಹನದಲ್ಲಿ ಬರುವ ಕಳ್ಳರು ಮಹಿಳೆಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ಅವರ ಕೊರಳಲ್ಲಿರುವ ಚಿನ್ನಾಭರಣಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದಾರೆ. ನಗರ ಪರಿಸರದಲ್ಲಿ ಕೆಲ ದಿನಗಳ ಹಿಂದೆ ನಡೆದ ಇಂತಹ ಚಿನ್ನಾಭರಣ ಕಳವು ಪ್ರಕರಣಗಳು ಸಂಚಲನ ಮೂಡಿಸಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಆಡಳಿತ ನಿಪ್ಪಾಣಿ ಹಾಗೂ ಸುತ್ತ-ಮುತ್ತಲಿನ ಭಾಗದಲ್ಲಿ ಭಿತ್ತಿಪತ್ರಗಳನ್ನು ಹಂಚಿ, ರಿಕ್ಷಾಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯದ ಜತೆಗೆ ಹಲವು ವಿಧಗಳಲ್ಲಿ ಜನಜಾಗೃತಿ ಕಾರ್ಯಗಳನ್ನು ಕೈಗೊಂಡಿದೆ ಎಂದು ಶಹರ ಪೊಲೀಸ್ ಠಾಣೆ ಪಿಎಸೈ ಉಮಾದೇವಿಗೌಡ ಹೇಳಿದರು.