ವಿಜಯಪುರ ಹಾಲಿನ ಡೇರಿಗೆ ₹4 ಲಕ್ಷ ನಿವ್ವಳ ಲಾಭ: ಸಂಘದ ಸಿಇಒ ಎನ್.ಮಂಜುನಾಥ್ಸಂಘವು ಪ್ರಸಕ್ತ ವರ್ಷದಲ್ಲಿ 4,17,000 ರು. ನಿವ್ವಳ ಲಾಭಗಳಿಸಿದೆ. ೩೦೬ ಸಕ್ರಿಯವಾದ ಸದಸ್ಯರಿದ್ದಾರೆ. ಪ್ರತಿನಿತ್ಯ ೩೪೫೧ ಲೀ. ಹಾಲು ಸಂಗ್ರಹ ಮಾಡಲಾಗುತ್ತಿದೆ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ಸಿಇಒ ಎನ್.ಮಂಜುನಾಥ್ ಹೇಳಿದರು. ವಿಜಯಪುರದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.