ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸಂಸತ್ ಚುನಾವಣೆ ವೇಳೆ ಅಕ್ರಮಗಳು ಆಗಿವೆ ಎಂಬ ರಾಹುಲ್ ಗಾಂಧಿ ಅವರ ಅನೇಕ ಆರೋಪಗಳಿಗೆ ಸ್ಥಳೀಯರು ತಿರುಗೇಟು ಕೊಟ್ಟಿದ್ದಾರೆ. ರಿಯಾಲಿಟಿ ಚೆಕ್ ವೇಳೆ ರಾಹುಲ್ ಆರೋಪ ಸುಳ್ಳು ಎಂದು ಹಲವರು ಹೇಳಿದ್ದಾರೆ.
ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿ ಎರಡು ಸಂಪುಟಗಳ 2,197 ಪುಟಗಳ ಶಿಕ್ಷಣ ನೀತಿಯ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಯೋಗ ಶುಕ್ರವಾರ ಸಲ್ಲಿಸಿತು.
ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಸ್ಥಿರೀಕರಣ ಸಮಿತಿ ಎಂಎಸ್‌ಪಿ ಯೋಜನೆಯಡಿ 2025-26ನೇ ಸಾಲಿನಲ್ಲಿ ರೈತರು ಬೆಳೆದ 14 ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಡಿ(ಎಂಎಸ್‌ಪಿ) ಖರೀದಿಸಲು ತೀರ್ಮಾನಿಸಿದೆ.
ಪ್ರತಿಭಟನಾ ಸಮಾವೇಶದುದ್ದಕ್ಕೂ ರಾಹುಲ್ ಗಾಂಧಿ ಕೆಂಪು ಬಣ್ಣದ ಸಂವಿಧಾನ ಪುಸ್ತಕವನ್ನು ಪ್ರದರ್ಶಿಸುತ್ತಲೇ ಇದ್ದರು. ಕಾರ್ಯಕ್ರಮ ಅಂತಿಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಕೈಗೆ ಸಂವಿಧಾನ ಪುಸ್ತಕ ನೀಡಿ, ಅವರ ಕೈಯನ್ನಿಡಿದು ಜನರತ್ತ ಎತ್ತಿದರು.
ಆ.15ರಂದು ನಡೆಯಲಿರುವ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ವೀಕ್ಷಿಸಲು ಮೂರು ಸಾವಿರ ಇ-ಪಾಸ್‌ಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆ ಮೇಲೆ ವಿತರಿಸಲಾಗುತ್ತದೆ. ಇ- ಪಾಸ್‌ನವರಿಗೆ ಮೈದಾನದೊಳಗೆ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗುವುದಿಲ್ಲ.