ಜವಹಾರ್ಲಾಲ್ ನೆಹರು ತಾರಾಲಯದ ಸ್ಕೈ ಥಿಯೇಟರ್ ಪ್ರವೇಶ ಶುಲ್ಕವೂ ಶೇ.25ರಷ್ಟು ಹೆಚ್ಚಳವಾಗಿದೆ. ವಯಸ್ಕರ ಪ್ರವೇಶಕ್ಕೆ ಹಾಲಿ ದರ ₹75 ರಿಂದ ₹100ಕ್ಕೆ ಏರಿಕೆಯಾಗಿದ್ದು, ಪರಿಷ್ಕೃತ ದರ ಏ.1ರಿಂದಲೇ ಜಾರಿಗೆ ಬರಲಿದೆ.
ಏ.1ರಿಂದ ಹೊಸ ವಿತ್ತೀಯ ವರ್ಷ ಆರಂಭವಾಗಲಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಹಾಕುವ ಕೆಲವು ಕ್ರಮಗಳು ಜಾರಿಗೆ ಬರಲಿವೆ. ಹಾಲು, ಮೊಸರು, ಟೋಲ್ ಶುಲ್ಕ, ಕಾರು ಸೇರಿ ಹಲವು ವಸ್ತು ದುಬಾರಿ ಆಗಲಿವೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ಸಂಶೋಧನಾ ಚಟುವಟಿಕೆಗಳಿಗಾಗಿ ಅಸ್ತಿತ್ವಕ್ಕೆ ಬಂದ ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದಲ್ಲಿ ಐದು ವರ್ಷಗಳಾದರೂ ಸಂಶೋಧನಾ ಚುಟವಟಿಕೆಗಳೇ ಶುರುವಾಗಿಲ್ಲ. ಇದಕ್ಕೆ ಎರಡು ಪ್ರಮುಖ ಕಾರಣಗಳು.
ಹಂಪಿ ವಿಠ್ಠಲ ಮಂಟಪದಲ್ಲಿನ ಕಲ್ಲಿನ ಕಂಬಗಳನ್ನು ನಿಧಾನವಾಗಿ ತಟ್ಟಿದಾಗ ಸಂಗೀತ ನಾದ ಕೇಳಿ ಬರುವಂತೆಯೇ ಸಂಗೀತ ನಾದ ಮೊಳಗಿಸುವ ಕಲ್ಲುಗಳನ್ನು ಹೊಸಪೇಟೆ ಧರ್ಮಸಾಗರ ಗ್ರಾಮದ ಸಮೀಪದಲ್ಲಿರುವ ದೇವಲಾಪುರದ ಕರೆಕಲ್ಲು ಗುಡ್ಡದಲ್ಲಿ ವಿಜಯನಗರ ತಿರುಗಾಟ ಸಂಶೋಧನಾ ತಂಡ ಪತ್ತೆ ಹಚ್ಚಿದೆ.
ಸೈಬರ್ ಖದೀಮರು ತಾವು ಪೊಲೀಸರೆಂದು ವೃದ್ಧ ದಂಪತಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟು, ಹಣ ಕೊಡದಿದ್ದರೆ ನಿಮ್ಮ ನಗ್ನ ಚಿತ್ರಗಳನ್ನು ವೃರಲ್ ಮಾಡುವುದಾಗಿ ಬೆದರಿಸಿದ ಪರಿಣಾಮ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ.
ಬೇನಾಮಿ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ನಕಲಿ ಚಿನ್ನವನ್ನೇ ಅಡವಿಟ್ಟು ಅದರ ಮೇಲೆ ಸಾಲ ಪಡೆದ ಬ್ಯಾಂಕ್ ವ್ಯವಸ್ಥಾಪಕ 10.97 ಕೋಟಿ ವಂಚಿಸಿರುವ ಘಟನೆ ಶುಕ್ರವಾರ ರಾಯಚೂರಿನಲ್ಲಿ ನಡೆದಿದೆ.