ಜಾತಿಗಣತಿ ಆರಂಭಕ್ಕೂಮುನ್ನ ಮತ್ತೆ ಲಿಂಗಾಯತ‘ಧರ್ಮ ದಂಗಲ್’ ಶುರುರಾಜ್ಯಾದ್ಯಂತ ಜಾತಿಗಣತಿ ಸೆ.22ರಿಂದ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಧರ್ಮ’ ಕಾಲಂನಲ್ಲಿ ಲಿಂಗಾಯತರು ‘ಹಿಂದು’ ಎಂದು ಬರೆಸಬೇಕೋ ಅಥವಾ ‘ಲಿಂಗಾಯತ’ ಎಂದು ಬರೆಸಬೇಕೋ ಎಂಬ ಬಗ್ಗೆ ರಾಜಕೀಯ ಜಟಾಪಟಿ ಆರಂಭವಾಗಿದೆ. ‘ಲಿಂಗಾಯತ ಪ್ರತ್ಯೇಕ ಧರ್ಮ’ ಎಂದು ವಾದಿಸುವವರು ಧರ್ಮ ಕಾಲಂನಲ್ಲಿ ‘ಲಿಂಗಾಯತ’ ಎಂದು ಬರೆಸಿ ಎಂದು ಪಟ್ಟು ಹಿಡಿದರೆ, ‘ಲಿಂಗಾಯತರೂ ಹಿಂದುಗಳು’ ಎಂದು ಪರಿಗಣಿಸುವವರು ‘ಹಿಂದು’ ಎಂದು ಬರೆಸಿ ಜಾತಿ ಕಾಲಂನಲ್ಲಿ ‘ಲಿಂಗಾಯತ’ ಎಂದು ಬರೆಸಿ ಎಂದು ಕರೆ ನೀಡಿದ್ದಾರೆ.