ನೀಟ್, ಎನ್‌ಟಿಎ ರದ್ದು ಮಾಡಲು ಸಿಪಿಎಂ ಆಗ್ರಹದೊಡ್ಡಬಳ್ಳಾಪುರ: ನೀಟ್ ಪ್ರವೇಶ ಪರೀಕ್ಷೆ ಕೂಡಲೇ ರದ್ದಾಗಬೇಕು. ಆಯಾ ರಾಜ್ಯಗಳೇ ಪ್ರವೇಶ ಪರೀಕ್ಷೆಗಳನ್ನು ನಡೆಸುವಂತಾಗಬೇಕು, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ರದ್ದು ಮಾಡಬೇಕು ಎಂದು ಆಗ್ರಹಿಸಿ ಸಿಪಿಐಎಂ ವತಿಯಿಂದ ಇಲ್ಲಿನ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.