ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 15ನೇ ಬಜೆಟ್ನನ್ನು ಶುಕ್ರವಾರ ಮಂಡಿಸಿದರು. 3.71 ಲಕ್ಷ ಕೋಟಿ ರು. ಗಾತ್ರದ ಮುಂಗಡ ಪತ್ರವನ್ನು ಅವರು ಮಂಡಿಸಿದರು. ಸಂಪೂರ್ಣ ಆಯವ್ಯಯದ ಸಂಕ್ಷಿಪ್ತ ನೋಟಿ ಇಲ್ಲಿದೆ.
ಬೆಂಗಳೂರು ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯಡಿ ವಿಶ್ವ ದರ್ಜೆಯ ನಗರವನ್ನಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಂಚಾರ ದಟ್ಟಣೆ ನಿವಾರಣೆ, ಮೆಟ್ರೋ ಹಾಗೂ ಉಪನಗರ ರೈಲ್ವೆ ಯೋಜನೆ ಜಾರಿ ಸೇರಿದಂತೆ ಹಲವು ಯೋಜನೆಗಳನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ.