ಮಹಿಳೆಯರ ಸ್ವ-ಉದ್ಯೋಗಕ್ಕೆ ಬಜೆಟ್ ಬಂಪರ್ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಮತ್ತು ಅವರ ಸಬಲೀಕರಣಕ್ಕಾಗಿ ‘ಶಕ್ತಿ ಹಾಗೂ ಗೃಹಲಕ್ಷ್ಮೀ’ ಗ್ಯಾರಂಟಿ ಯೋಜನೆ ಘೋಷಿಸಿದ ಹಾಗೂ ಅಧಿಕಾರ ಬಂದ ಕೆಲವೇ ದಿನಗಳಲ್ಲಿ ಈ ಎರಡೂ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ 2.0 ಸರ್ಕಾರದ ಎರಡನೇ ಬಜೆಟ್ನಲ್ಲೂ ಸಹ ಮಹಿಳಾ ಆರ್ಥಿಕತೆಗೆ ಹಾಗೂ ಆರೋಗ್ಯಕ್ಕೆ ಶಕ್ತಿ ತುಂಬಲು ಭರಪೂರ ಯೋಜನೆ ಘೋಷಿಸಿದ್ದಾರೆ.