ಸಂತ ಶ್ರೇಷ್ಠರ ಜೀವನ ಮನುಕುಲದ ಪ್ರೇರಕ ಶಕ್ತಿನೆಲಮಂಗಲ/ದಾಬಸ್‍ಪೇಟೆ: ಶೈಕ್ಷಣಿಕ, ಧಾರ್ಮಿಕ, ಹಾಗೂ ಸಾಮಾಜಿಕ ಬದ್ದತೆಯನ್ನು ಇಟ್ಟುಕೊಂಡು ಪೂಜ್ಯರ ನೇತೃತ್ವದಲ್ಲಿ ಸ್ವಾವಲಂಬಿ ಸಮಾಜವನ್ನು ನಿರ್ಮಿಸುತ್ತಿರುವ ಪೂರ್ಣಾನಂದಪುರಿ ಶ್ರೀಗಳ ಸೇವೆ ಅನನ್ಯವಾದುದು, ಸಂತ ಶ್ರೇಷ್ಟರ ತಪಸ್ವಿ ಜೀವನ ಮನುಕುಲದ ಪ್ರೇರಕ ಶಕ್ತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.