ಬಲವಂತದ ಭೂ ಸ್ವಾಧೀನ ವಿರುದ್ಧ ಹೋರಾಟಕ್ಕೆ ಸಿದ್ಧತೆಕುಂದಾಣ: ತಟಮಾಚನಹಳ್ಳಿ ಇರಿಗೇನಹಳ್ಳಿ , ಜಿ.ಹೊಸೂರು, ಬುಳ್ಳಹಳ್ಳಿ ಗ್ರಾಮಗಳು ಒಳಗೊಂಡಂತೆ ವೆಂಕಟಗಿರಿಕೋಟೆ ರೈಲ್ವೆ ನಿಲ್ದಾಣದ ಬಳಿ ೧೦೦ ಎಕರೆ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬೃಹತ್ ರೈಲ್ವೆ ಟರ್ಮಿನಲ್ ನಿಲ್ದಾಣ ಮತ್ತು ಸರ್ಕ್ಯೂಲರ್ ರೈಲ್ವೆ ಲೈನ್ ಯೋಜನೆಯನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಯುವ ಘಟಕದ ರಾಜ್ಯಾಧ್ಯಕ್ಷ ಡಾ. ಬಿ.ಕೆ.ವಿನೋದ್‌ಕುಮಾರ್‌ಗೌಡ ನೇತೃತ್ವದಲ್ಲಿ ಪ್ರಭಾರ ಜಿಲ್ಲಾಧಿಕಾರಿ ಡಾ. ಅನುರಾಧ ಅವರಿಗೆ ಮನವಿ ಪತ್ರ ಸಲ್ಲಿಸಿದರು.