ಕನ್ನಡದ ಕವಿ, ನಾಟಕಕಾರ, ಗೀತರಚನೆಕಾರ ಡಾ। ಎಚ್.ಎಸ್.ವೆಂಕಟೇಶಮೂರ್ತಿ(ಎಚ್‌ಎಸ್‌ವಿ) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶನಿವಾರ ನೆರವೇರಿತು.
ರಾಜ್ಯದಲ್ಲಿ ಈ ಬಾರಿ ಪೂರ್ವ ಮುಂಗಾರು ಮತ್ತು ಮೇ ತಿಂಗಳಲ್ಲಿ ಆದ ದಾಖಲೆ ಮಳೆಗೆ 71 ಜನರ ಜೀವ ಹಾನಿ, 702 ಪ್ರಾಣಿಗಳ ಸಾವು, 2068 ಮನೆ ಹಾನಿ ಮತ್ತು 15,378 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ.
ನಟ ಕಮಲ್ ಹಾಸನ್ ಅವರಿಗೆ ಕ್ಷಮೆ ಕೇಳಲು ಸೋಮವಾರದ ವರೆಗೆ ಗಡುವು ನೀಡಿದ್ದು, ನಂತರ ಕ್ಷಮೆ ಕೇಳಿದರೂ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡುವುದಿಲ್ಲ’
ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದರೂ ಕ್ಷಮೆ ಯಾಚಿಸದ ನಟ ಕಮಲ್ ಹಾಸನ್ ಅವರ ಬೆಂಬಲಕ್ಕೆ ತಮಿಳುನಾಡಿನ ಕಲಾವಿದರ ಸಂಘ ಧಾವಿಸಿದೆ.
ರಸ್ತೆಯಲ್ಲಿ ಸಂಚಾರ ಪೊಲೀಸರ ವಾಹನ ತಪಾಸಣೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಲವು ಸೂಚನೆಗಳನ್ನು ನೀಡಿದ್ದಾರೆ.
ನಗರದ ಪ್ರಮುಖ ಎಂಟು ದೇವಸ್ಥಾನಗಳ ಪ್ರವಾಸಕ್ಕಾಗಿ ಬಿಎಂಟಿಸಿ ದಿವ್ಯ ದರ್ಶನ ಪ್ರವಾಸಿ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ವಾರದ ಎಲ್ಲ ದಿನಗಳಲ್ಲೂ ಸೇವೆ ವಿಸ್ತರಿಸಲು ಬಿಎಂಟಿಸಿ ನಿರ್ಧರಿಸಿದೆ.
ವಿಧಾನಸೌಧ ಕುರಿತ ಜನರಲ್ಲಿನ ಕುತೂಹಲ ತಣಿಸಲು ಆರಂಭಿಸಲಾಗಿರುವ ‘ವಿಧಾನಸೌಧ ಮಾರ್ಗದರ್ಶಿ’ ಪ್ರವಾಸ ಭಾನುವಾರದಿಂದ ಪ್ರಾರಂಭವಾಗುತ್ತಿದೆ.
ಕಡು ಬಡವರಿಗೂ ಸಮಗ್ರ ಆರೋಗ್ಯ ಸೇವೆ ಒದಗಿಸಲು ನಾರಾಯಣ ಹೃದಯಾಲಯ ಐದು ಸಾವಿರ ಮನೆಗೆಲಸ ಮಾಡುವ ಕುಟುಂಬಗಳಿಗೆ ಆರೋಗ್ಯ ವಿಮೆ
ಡೋಪಿಂಗ್ ಆರೋಪದಲ್ಲಿ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಆಟಗಾರ ಶಶಾಂಕ್ ಜೆ. ರೈ ಅವರನ್ನು ನಾಲ್ಕು ವರ್ಷಗಳ ಕಾಲ ಕ್ರೀಡಾಕೂಟಗಳಿಂದ ಅನರ್ಹಗೊಳಿಸಿ ಡೋಪಿಂಗ್ ತಡೆ ಶಿಸ್ತು ಸಮಿತಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.