ಸಾರಾಂಶ
ಕಮತಗಿ ರಾಜ್ಯ ಸರ್ಕಾರ ಬಡವರಿಗೆ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು, ಫಲಾನುಭವಿಗಳು ಯೋಜನೆಗಳ ಸದುಪಯೋಗ ಪಡೆದು ಗುಣಮಟ್ಟದ ಮನೆಗಳನ್ನು ನಿರ್ಮಣ ಮಾಡಿಕೊಳ್ಳಿ ಎಂದು ಶಾಸಕ ಎಚ್ ವೈ ಮೇಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಕಮತಗಿ ರಾಜ್ಯ ಸರ್ಕಾರ ಬಡವರಿಗೆ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು, ಫಲಾನುಭವಿಗಳು ಯೋಜನೆಗಳ ಸದುಪಯೋಗ ಪಡೆದು ಗುಣಮಟ್ಟದ ಮನೆಗಳನ್ನು ನಿರ್ಮಣ ಮಾಡಿಕೊಳ್ಳಿ ಎಂದು ಶಾಸಕ ಎಚ್ ವೈ ಮೇಟಿ ಹೇಳಿದರು.
ಸಮೀಪದ ಶಿರೂರ ಪಟ್ಟಣದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಹಾಗೂ ಜಿಲ್ಲಾ ನಗರಾಭಿವೃದ್ಧಿಕೋಶ, ಶಿರೂರ ಪಟ್ಟಣ ಪಂಚಾಯಿತಿ ವತಿಯಿಂದ 21-22ನೇ ಸಾಲಿನ ವಾಜಪೇಯಿ ಮತ್ತು ಅಂಬೇಡ್ಕರ ವಸತಿ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ ಹಾಗೂ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಶಿರೂರ ಪಟ್ಟಣದಲ್ಲಿ ₹1.21 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ, ಸಿಸಿ ರಸ್ತೆ, ಸಿಡಿ ನಿರ್ಮಾಣ,ರಸ್ತೆ ಅಭಿವೃದ್ಧಿ, ಬೋರವೆಲ್ ಕೊರೆಯಿಸುವುದು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದ್ದು, ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ತಿಳಿಸಿದರು.ಈ ವೇಳೆ 145 ಫಲಾನುಭವಿಗಳಿಗೆ ಮನೆ ನಿರ್ಮಾಣದ ಆದೇಶ ಪತ್ರ ನೀಡಲಾಯಿತು. ಪ.ಪಂ ಮುಖ್ಯಾಧಿಕಾರಿ ಎನ್. ಎಂ ಮೆಸ್ತಾ, ಯು.ಜಿ ವರದಪ್ಪನವರ, ಗ್ರಾ.ಪಂ ಮಾಜಿ ಅಧ್ಯಕ್ಷ ರಂಗಪ್ಪ ಮಳ್ಳಿ, ಪಿಕೆಪಿಎಸ್ ಅಧ್ಯಕ್ಷ ಮುತ್ತಪ್ಪ ಬಿಲ್ಲಾರ, ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಎಸ್.ಎನ್ ರಾಂಪೂರ, ಹನಮಂತ ಆಡಿನ, ಜಗದೀಶ ದೇಸಾನಿ, ಸಿದ್ದಪ್ಪ ಗಾಳಿ, ಗುರಪ್ಪಗೌಡ ಪಾಟೀಲ, ರಾಮನಗೌಡ ಮಾಚಾ, ಸುರೇಶ ರಾಜೂರ, ಅರ್ಜುನ ಅಂಗಡಿ ಹಾಗೂ ಪಪಂ ಸಿಬ್ಬಂದಿ ಇತರರು ಇದ್ದರು.