ಸಂಬಳಕ್ಕಾಗಿ ನಗರಸಭಾ ಹೊರಗುತ್ತಿಗೆ ನೌಕರರ ಪ್ರತಿಭಟನೆಕಳೆದ ನಾಲ್ಕು ತಿಂಗಳಿನಿಂದ ಸಂಬಳ ನೀಡದೆ ದುಡಿಸುತ್ತಿರುವ ಚಾಮರಾಜನಗರ ನಗರಸಭೆ ವಿರುದ್ಧ ಹೊರಗುತ್ತಿಗೆ ನೌಕರರು ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರು ಮಹಾ ಸಂಘದ ಸಹಯೋಗದಲ್ಲಿ ನಗರಸಭೆಯ ಬಳಿ ಪ್ರತಿಭಟನೆ ನಡೆಸಿದರು. ನಗರಸಭಾ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ನಗರಸಭೆ ಪೌರಾಯುಕ್ತರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.