ಬಾಳೆ ಗ್ರಾಮದ ಜಮೀನಿನ ಖಾತೆಗೆ ಒತ್ತಾಯಿಸಿ ತಹಸೀಲ್ದಾರ್ ಗೆ ಮನವಿನರಸಿಂಹರಾಜಪುರ, ಪಟ್ಟಣದ ಪೌರ ಕಾರ್ಮಿಕರ ಬೀದಿಯ ಪ.ಜಾತಿಗೆ ಸೇರಿದ 6 ಕುಟುಂಭದವರಿಗೆ ಬಾಳೆ ಗ್ರಾಮದ ಸರ್ವೆ ನಂ.19 ರಲ್ಲಿ ಮಂಜೂರಾಗಿದ್ದ 12 ಎಕರೆ ಜಮೀನಿಗೆ ಖಾತೆ, ಪಹಣಿ, ಸರ್ವೆ ಮಾಡಿ ಕಲ್ಲು ಬಾಂದು ಹಾಕಿಸಿ ಜಮೀನನ್ನು ನಮ್ಮ ಸ್ವಾಧೀನಕ್ಕೆ ನೀಡಬೇಕು ಎಂದು ಆಗ್ರಹಿಸಿ ಪ.ಜಾತಿಗೆ ಸೇರಿದ 6 ಕುಟುಂಬದವರು ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡರು ಶನಿವಾರ ತಹಸೀಲ್ದಾರ್ ಡಾ.ನೂರಲ್ ಹುದಾ ಅವರಿಗೆ ಮನವಿ ಪತ್ರ ಅರ್ಪಿಸಿದರು.