ವಕ್ಫ್ ಮಂಡಳಿ ಮೇಳೆ ಹಿಡಿತ ಸಾಧಿಸಲು ಆಗ್ರಹರಾಜ್ಯದಾದ್ಯಂತ ವಕ್ಫ್ ಆಸ್ತಿ ಸಂಬಂಧಿಸಿದ ಗದ್ದಲಗಳು ಮಾರ್ದನಿಸಿದ್ದು, ರೈತರು ಒಳಗೊಂಡಂತೆ ಹಿಂದೂ, ಕ್ರೈಸ್ತ ಮುಸ್ಲಿಂ ಬಾಂಧವರು ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕಾನೂನು ಜಾರಿಗೆ ತರಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತ ಭೂಮಿಗಳ ಮೇಲೆ ವಕ್ಫ್ ಹಿಡಿತ ಸಾಧಿಸುವುದನ್ನು ತಡೆಯಬೇಕು ಎಂದು ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.