ಕಮ್ಮಾರ ಕಲ್ಲಯ್ಯ ಜಯಂತಿಗೆ ಸರ್ಕಾರ ಆದೇಶಿಸಲಿಮೊಳಕಾಲ್ಮುರು: ಕಮ್ಮಾರಿಕೆ ವೃತ್ತಿಯನ್ನೇ ನಂಬಿಕೊಂಡು ಬದುಕನ್ನು ಕಟ್ಟಿಕೊಂಡಿರುವ ಕಮ್ಮಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಡಿ ಸೌಲಭ್ಯಗಳು ತಲುಪುತ್ತಿಲ್ಲ. ಪರಿಣಾಮ ಸಮಾಜದಲ್ಲಿ ಕಮ್ಮಾರ ಸಮುದಾಯ ಇಂದಿಗೂ ಅತ್ಯಂತ ಹಿಂದುಳಿಯುವಂತಾಗಿದೆ ಎಂದು ರಾಜ್ಯ ಕಮ್ಮಾರ ಸಂಘಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಮಂಜಣ್ಣ ಕಮ್ಮಾರ್ ಹೇಳಿದರು.