ನೈಜ ಸುದ್ದಿಗಳ ಪ್ರಕಟಿಸುವ ಹೊಣೆಗಾರಿಕೆ ಪತ್ರಿಕೆಗಳು ಹೊರಲಿಚಿತ್ರದುರ್ಗ: ನ್ಯಾಯಾಲಯ ಪ್ರಜಾಪ್ರಭುತ್ವದಲ್ಲಿ ನ್ಯಾಯ ಕೊಡುವ ಅಂಗ. ಅದೇ ರೀತಿ ಪತ್ರಿಕಾರಂಗ ಸಂವಿಧಾನದ ನಾಲ್ಕನೆ ಅಂಗ. ಸರ್ಕಾರ ತಪ್ಪು ಮಾಡಿದಾಗ ನೈಜ ಸುದ್ದಿಗಳನ್ನು ಪ್ರಕಟಿಸಿ ಸಾರ್ವಜನಿಕರನ್ನು ಜಾಗೃತಿಗೊಳಿಸುವ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.