ಸೆಲ್ಲರ್ನಿಂದ ನೀರು ಹೊರ ಹಾಕಲು ವ್ಯಾಪಾರಿಗಳು ಹೈರಾಣ ಐತಿಹಾಸಿಕ ಚಿತ್ರದುರ್ಗ ಕೋಟೆ ಒಳ ಆವರಣದಲ್ಲಿರುವ ಗೋಪಾಲಸ್ವಾಮಿ ಹೊಂಡ, ಹೊರ ಆವರಣದಲ್ಲಿರುವ ಸಿಹಿನೀರು ಹೊಂಡ, ಸಂತೆ ಹೊಂಡ ಎಲ್ಲವೂ ಭರ್ತಿಯಾಗಿವೆ. ಜಲಪಾತ್ರೆಗಳು ತುಂಬಿ ತುಳುಕಾಡುವ ದೃಶ್ಯಾವಳಿಗಳು ಒಂದೆಡೆ ಮನಸ್ಸಿಗೆ ಮುದ ನೀಡಿದರೆ ಮತ್ತೊಂದೆಡೆ ವ್ಯಾಪಾರಿಗಳ ಮನದಲ್ಲಿ ತಲ್ಲಣಗಳ ಸೃಷ್ಟಿಸಿವೆ. ಕನಿಷ್ಟ ಮೂರು ತಿಂಗಳು ದುಬಾರಿ ವಿದ್ಯುತ್ ಬಿಲ್ ಪಾವತಿ ಮಾಡಬೇಕಾದ ಅನಿವಾರ್ಯತೆ ಅವರದ್ದಾಗಿದೆ.