ನಾಳೆಯಿಂದ ಮೂರು ದಿನ ಬಿಲ್ಲವ, ಈಡಿಗ ಪಂಗಡಗಳ ವಿಶ್ವ ಸಮ್ಮೇಳನನಾರಾಯಣ ಟಿ. ಪೂಜಾರಿ ಅವರಿಗೆ ಬಿಲ್ಲವ ರತ್ನ, ದಯಾನಂದ್ ಬೋಂಟ್ರರಿಗೆ ಬಿಲ್ಲವ ಸುವರ್ಣ ರತ್ನ, ಬಿಲ್ಲವ ಫ್ಯಾಮಿಲಿ ದುಬೈನ ಎಸ್.ಕೆ. ಪೂಜಾರಿ ಅವರಿಗೆ ಬಿಲ್ಲವ ಸೇವಾ ರತ್ನ, ಮನೋಜ್ ಸರಿಪಳ್ಳಗೆ ಬಿಲ್ಲವ ಯುವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 25ರಂದು ಸಂಜೆ 4 ರಿಂದ ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆ ‘ಸುವರ್ಣ ಸಿರಿ-2025’ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ತೇಜೋಮಯ ಹೇಳಿದರು.