ಕರಾವಳಿ ಕಲೋತ್ಸವ: ಡಾ. ಮೋಹನ ಆಳ್ವಗೆ ಕರಾವಳಿ ಸೌರಭ ಪ್ರಶಸ್ತಿ ಪ್ರದಾನರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಂಟ್ವಾಳ ಚಿಣ್ಣರಲೋಕ, ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಹಾಗೂ ಚಿಣ್ಣರಲೋಕ ಸೇವಾಬಂಧು ಸಹಯೋಗದಲ್ಲಿ ಬಿ.ಸಿ. ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಉತ್ಸವ ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್ ಒಳಗೊಂಡ ಕರಾವಳಿ ಕಲೋತ್ಸವದಲ್ಲಿ ಶನಿವಾರ ಸಂಜೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಅವರಿಗೆ ಕರಾವಳಿ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.