ಕರಾವಳಿಯ ಅಡಕೆ ತೋಟಗಳಲ್ಲೀಗ ಕಾಫಿಯ ಪರಿಮಳ: ಅಡಕೆ ಹಳದಿ ರೋಗ ಪೀಡಿತ ಪ್ರದೇಶಗಳಲ್ಲಿ ಪರ್ಯಾಯ ಬೆಳೆಯಾಗಿ ಕಾಫಿ ಬೆಳೆಈಗ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಅಡಕೆ ಬೆಳೆಗಾರರೇ ಉಪ ಬೆಳೆಯಾಗಿ ಕಾಫಿ ಬೆಳೆಯಲು ಆರಂಭಿಸಿದ್ದಾರೆ. ಕಳೆದ ಒಂದು ವರ್ಷದಿಂದ ಅಡಕೆ ಬೆಳೆಗಾರರಲ್ಲಿ ಕಾಫಿ ಮಮತೆ ಜಾಸ್ತಿಯಾಗಿದ್ದು, ಸುಮಾರು 50ರಿಂದ 80 ಹೆಕ್ಟೇರ್ ವರೆಗೆ ಕಾಫಿ ಬೆಳೆ ಬೆಳೆಯುತ್ತಿದ್ದಾರೆ.