ಇಂದಿರಾ ಆಸ್ಪತ್ರೆಯ ೨೫ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಆಸ್ಪತ್ರೆ ಜನಸ್ನೇಹಿ ಎನಿಸಿಕೊಳ್ಳಬೇಕಾದರೆ ಶುಶ್ರೂಷೆ, ಆರೈಕೆಯಲ್ಲಿ ವಿಜ್ಞಾನ, ತಂತ್ರಜ್ಞಾನದ ಅಳವಡಿಕೆ ಮಾತ್ರ ಸಾಲದು. ಅದರೊಂದಿಗೆ ಸಹಾನುಭೂತಿ ಇರುವ ಸಿಬ್ಬಂದಿ, ವೈದ್ಯರ ತಂಡ ಇವೆರಡೂ ಇರಬೇಕು ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಅವರು ಗುರುವಾರ ನಗರದ ಇಂದಿರಾ ಆಸ್ಪತ್ರೆಯ ೨೫ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.