ರಸ್ತೆಯ ಇಕ್ಕೆಲ ‘ಕಸ ತೋರಣ’!ಗ್ರಾಮ ಪಂಚಾಯಿತಿಗಳು, ನಗರ ಪಂಚಾಯಿತಿ, ಪುರಸಭೆ, ಮಹಾನಗರ ಪಾಲಿಕೆಗಳು ಕೂಡ ಸ್ವಚ್ಛತೆಯ ವಿಚಾರದಲ್ಲಿ ಹೆಚ್ಚು ತಲೆ ಕೆಡಿಸಿಕೊಂಡು ಅನುದಾನಗಳನ್ನು ಹೆಚ್ಚು ಹೆಚ್ಚು ವ್ಯಯ ಮಾಡುತ್ತಿದೆ. ಹೀಗಿದ್ದರೂ ಕೂಡ ಸ್ವಚ್ಛತೆಯ ವಿಚಾರದಲ್ಲಿ ಸ್ಥಳೀಯ ಆಡಳಿತಗಳು ಸೋತಿದೆ ಎನ್ನುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಕಂಡು ಬರುತ್ತಿರುವ ರಸ್ತೆಗಳ ಇಕ್ಕೆಲಗಳ ಕಸಗಳೇ ಸಾಕ್ಷಿ ಎಂದರೆ ತಪ್ಪಲ್ಲ.