ಹೆಜಮಾಡಿ ಗ್ರಾಮ ಪಂಚಾಯಿತಿ-ಟೋಲ್ ಗೇಟ್ ಜಟಾಪಟಿಒಳ ರಸ್ತೆಯಲ್ಲಿ ಟೋಲ್ ಬಗ್ಗೆ ಹೆಜಮಾಡಿ ಗ್ರಾಮ ಪಂಚಾಯಿತಿ ಮತ್ತು ಟೋಲ್ ನವರ ಮಧ್ಯೆ ನಡೆದ ವಿವಾದ ತಾರಕಕ್ಕೇರಿದೆ. ಗುರುವಾರ ಟೋಲ್ ಗೇಟ್ ಅಧಿಕಾರಿಗಳು ಲೋಕೋಪಯೋಗಿ ರಸ್ತೆಗೆ ಹಾಕಲು ತಂದಿದ್ದ ತಡೆಬೇಲಿ, ಜನರೇಟರ್ ಸಹಿತ ಇನ್ನಿತರ ವಸ್ತುಗಳನ್ನು ಹೆಜಮಾಡಿ ಗ್ರಾಮ ಪಂಚಾಯತಿ ಜಪ್ತಿ ಮಾಡಿದೆ.