ಇಂದು ಮಂಗಳೂರು-ಮಡ್ಗಾಂವ್ ವಂದೇ ಭಾರತ್ ಸಂಚಾರ: ಉದ್ಘಾಟನಾ ಸಿದ್ಧತೆ ಪರಿಶೀಲಿಸಿದ ಸಂಸದ ನಳಿನ್ ಕುಮಾರ್ಬೆಳಗ್ಗೆ 10 ಗಂಟೆಗೆ ಸೆಂಟ್ರಲ್ ರೈಲು ನಿಲ್ದಾಣದ ಒಂದೇ ಫ್ಲ್ಯಾಟ್‌ಫಾರಂನಲ್ಲಿ ಔಪಚಾರಿಕ ಸಮಾರಂಭ ನಡೆಯಲಿದೆ. 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಂದೇ ಭಾರತ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವರು. ಈ ಸಂದರ್ಭ ಸ್ಥಳೀಯ ಜನಪ್ರತಿನಿಧಿಗಳು, ರೈಲ್ವೆ ಅಧಿಕಾರಿಗಳು ಹಾಜರಿರುವರು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಶುಕ್ರವಾರ ಮಂಗಳೂರು ರೈಲು ನಿಲ್ದಾಣದಲ್ಲಿ ಸಿದ್ಧತೆ ಪರಿಶೀಲನೆ ಬಳಿಕ ಹೇಳಿದರು.