ದಂಡಿಯಾತ್ರೆಯಲ್ಲಿ ದಲಿತರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿತ್ತು: ಪ್ರೊ.ಕೆ. ಕಾಳಚನ್ನೇಗೌಡ

| Published : Mar 22 2024, 01:06 AM IST

ದಂಡಿಯಾತ್ರೆಯಲ್ಲಿ ದಲಿತರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿತ್ತು: ಪ್ರೊ.ಕೆ. ಕಾಳಚನ್ನೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನಮಗೆ 400/ 500 ಜನರನ್ನು ನಿಯಂತ್ರಿಸಲು ಬಹಳ ಕಷ್ಟವಾಗುತ್ತದೆ. ಆದರೆ ಗಾಂಧೀಜಿ ಅವರು ಅಹಿಂಸಾ ತತ್ವವನ್ನು ಅನುಸರಿಸಿ ಇಂತಹ ದೊಡ್ಡ ಯಾತ್ರೆಯನ್ನೇ ನಡೆಸಿದರು. ಗಾಂಧೀಜಿ ಅವರು 18 ಯೋಜನೆಗಳನ್ನು ರಚನಾತ್ಮಕ ಕಾರ್ಯ ಜಾರಿಗೊಳಿಸಿದರು. ಈ ದೇಶದ ನೇತಾರರಾಗಲು ರಚನಾತ್ಮಕ ಕಾರ್ಯಗಳು ಗ್ರಾಮೀಣ ಭಾಗದಲ್ಲಿ ಜಾರಿಗೆ ಬಂದಿದ್ದು ಯಶಸ್ವಿಯಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಗಾಂಧೀಜಿಯವರು ದಲಿತರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ತಮ್ಮ ದಂಡಿಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾಗಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಕೆ. ಕಾಳಚನ್ನೇಗೌಡ ತಿಳಿಸಿದರು.

ನಗರದ ಶ್ರೀ ನಟರಾಜ ಪ್ರತಿಷ್ಠಾನದ ವಾತ್ಸಲ್ಯ ಬಿಇಡಿ ಕಾಲೇಜಿನಲ್ಲಿ ಗುರುವಾರ ನಡೆದ ದಂಡಿಯಾತ್ರೆ 1930ರ ನೆನಪು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಸುಮಾರು 184 ದೇಶಗಳಲ್ಲಿ ಗಾಂಧೀಜಿ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಜಗತ್ತಿನ ನೇತಾರ ಗಾಂಧೀಜಿ ಚೈನಾ ಮತ್ತು ಜಪಾನ್ ನಲ್ಲಿ ಗಾಂಧಿಯ ಬಗೆಗೆ ಪಠ್ಯಕ್ರಮಗಳಿವೆ. 1262 ಕಡೆ ಗಾಂಧಿಯ ಸಂಶೋಧನಾ ಕೇಂದ್ರಗಳಿವೆ. ಪ್ರತಿದಿನ 100 ರಿಂದ 120 ಪತ್ರಗಳನ್ನು ಬರೆಯುತ್ತಿದ್ದಂತ ಗಾಂಧಿ ಅವರು ಯಾರೇ ಅವರ ಜೊತೆ ಮಾತನಾಡಿದರು. ಗೌರವ ಪೂರ್ವಕವಾಗಿ ಉತ್ತರಿಸುತ್ತಿದ್ದರು.

ಪ್ರತಿಯೊಂದು ಪತ್ರಗಳಿಗೂ ಉತ್ತರ ನೀಡುತ್ತಿದ್ದರು. ಪ್ರಪಂಚದ ಬಹಳಷ್ಟು ದೇಶಗಳಲ್ಲಿ ಭಾರತವೆಂದರೆ ಗಾಂಧಿ ಲ್ಯಾಂಡ್ ಎಂದು ಕರೆಯುತ್ತಾರೆ. ಗಾಂಧಿ ಅವರ ಚಟುವಟಿಕೆಗಳು ಅವರ ಕರೆಗಳು ಎಲ್ಲರಲ್ಲೂ ಒಂದುಗೂಡಿಸುವಂತೆ ಮಾಡಿತು. ಪ್ರತಿಯೊಬ್ಬರೂ ಕೂಡ ದಂಡಿ ಯಾತ್ರೆಯಲ್ಲಿ ಭಾಗವಹಿಸಿದರು, ಈಗಿನ ಕಾಲದಲ್ಲಿ ಜಾಲತಾಣಗಳು ಮತ್ತು ಸಮೂಹ ಮಾಧ್ಯಮ ಇರುವುದರಿಂದ ಎಲ್ಲಾ ಕಡೆಯೂ ಸುದ್ದಿಗಳು ಬಹಳ ಬೇಗನೆ ರವಾನೆ ಆಗುತ್ತದೆ. ಆದರೆ ಆಗಿನ ಕಾಲದಲ್ಲಿ ಯಾವುದೇ ಸಮೂಹ ಮಾಧ್ಯಮಗಳು ಇರಲಿಲ್ಲ. ಆದರೂ ಕೂಡ ಗಾಂಧಿಯನ್ನು ನೋಡದೆ ಇರುವವರು ಈ ಯಾತ್ರೆಯಲ್ಲಿ ಭಾಗವಹಿಸಿದ್ದಾಗಿ ಅವರು ತಿಳಿಸಿದರು.

ನಮಗೆ 400/ 500 ಜನರನ್ನು ನಿಯಂತ್ರಿಸಲು ಬಹಳ ಕಷ್ಟವಾಗುತ್ತದೆ. ಆದರೆ ಗಾಂಧೀಜಿ ಅವರು ಅಹಿಂಸಾ ತತ್ವವನ್ನು ಅನುಸರಿಸಿ ಇಂತಹ ದೊಡ್ಡ ಯಾತ್ರೆಯನ್ನೇ ನಡೆಸಿದರು. ಗಾಂಧೀಜಿ ಅವರು 18 ಯೋಜನೆಗಳನ್ನು ರಚನಾತ್ಮಕ ಕಾರ್ಯ ಜಾರಿಗೊಳಿಸಿದರು. ಈ ದೇಶದ ನೇತಾರರಾಗಲು ರಚನಾತ್ಮಕ ಕಾರ್ಯಗಳು ಗ್ರಾಮೀಣ ಭಾಗದಲ್ಲಿ ಜಾರಿಗೆ ಬಂದಿದ್ದು ಯಶಸ್ವಿಯಾಯಿತು. ಒಂದು ಕಾಲೇಜಿನಲ್ಲಿ ಏರ್ಪಡಿಸುವ ಕಾರ್ಯಕ್ರಮ ಹೇಗೆ ವ್ಯವಸ್ಥಿತವಾಗಿರಬೇಕು ಹೇಗೆ ನಡೆಯಬೇಕು ಎಂಬುದನ್ನು ಯೋಚಿಸುತ್ತಿವೋ ಅದೇ ರೀತಿಯಲ್ಲಿ ದಂಡಿಯಾತ್ರೆಯು ಹೀಗೆ ನಡೆಯಬೇಕು ಎಂದು ವ್ಯವಸ್ಥಿತವಾಗಿ ರೂಪುಗೊಳ್ಳುವುದರಲ್ಲಿ ಯಶಸ್ವಿಯಾಯಿತು ಎಂದರು.

ಯಾವುದೇ ರೀತಿಯ ಜಾತಿ ಮತ ಭೇದವಿಲ್ಲದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಉಪ್ಪಿನ ಸತ್ಯಾಗ್ರಹಕ್ಕೆ ಮುಂದಾದರು. ಮಾ. 12ರಂದು ಪ್ರಾರಂಭವಾಗಿ 24 ದಿನಗಳು ನಿರಂತರವಾಗಿ ಸಬರಮತಿ ಆಶ್ರಮದಿಂದ ದಂಡಿ ಎನ್ನುವವರೆಗೂ ಈ ಯಾತ್ರೆ ನಡೆಯಿತು. ಏ. 6ಕ್ಕೆ ದಂಡಿಯಾತ್ರೆಯು ದಂಡಿ ಎಂಬುವ ಸ್ಥಳವನ್ನು ತಲುಪುವ ಮೂಲಕ ಕೊನೆಗೊಳಿಸುವುದಾಗಿ ತೀರ್ಮಾನಿಸಿದರು. ಇದೇ ದಿನ ಏಕೆ ಎನ್ನುವ ಪ್ರಶ್ನೆ ಬಂದಾಗ ಜಲಿಯನ್ ವಾಲಾಬಾಗ್ ಹತ್ಯಾಖಾಂಡವಾದಂತಹ ಸಂದರ್ಭ ಇದಾಗಿರುವುದರಿಂದ ಇದರ ವರ್ಷಾಚರಣೆಗೆ ಜನರ ಮನಸ್ಸಿನಲ್ಲಿ ಈ ಘಟನೆ ಅಚ್ಚುಳಿಯಬೇಕು ಎಂಬ ಕಾರಣದಿಂದ ಅವತ್ತಿನ ದಿನವೇ ಕೊನೆಗೊಳಿಸುತ್ತಾರೆ. ಇತ್ತೀಚೆಗೆ ಶಿವರಾತ್ರಿಯ ಸಂದರ್ಭದಲ್ಲಿ ಜನರು ಹೇಗೆ ಯಾತ್ರೆ ಹೊರಡುತ್ತಾರೋ ಅದೇ ರೀತಿ ಅಂದಿನ ಕಾಲದಲ್ಲಿ ಗಾಂಧೀಜಿ ಅವರ ನೇತೃತ್ವದಲ್ಲಿ ಒಂದು ತೀರ್ಥಯಾತ್ರೆಯಾದಂತೆಯೇ ದಂಡೆಯಾತ್ರೆಯೂ ಕೂಡ ನಡೆಯಿತು ಎಂದರು.

18 ಜನರ ತಂಡ ಒಂದನ್ನು ಏರ್ಪಡಿಸಿ ಕಳುಹಿಸಿ ದಂಡಿಯಾತ್ರೆ ನಡೆಸುವ ವೇಳೆ ನೀಡಲೆಂದೇ ಹದಿನೆಂಟು ಜನರನ್ನು ನೇಮಿಸಿದರು. ಈ ದಂಡಿಯಾತ್ರೆಯಲ್ಲಿ 87 ಜನರನ್ನು ಪ್ರಮುಖವಾಗಿ ಹಾರಿಸಿಕೊಂಡು ಉಳಿದವರು ಕೂಡ ಭಾಗವಹಿಸುವ ಅವಕಾಶ ನೀಡಿದರು. ಗುಜರಾತ್, ಮಹಾರಾಷ್ಟ್ರ, ಕರ್ನಾಟಕದಿಂದ 19 ವರ್ಷದ ಚಿಕ್ಕ ಯುವಕನಾದ ಮೈಲಾರ ಮಹದೇವಪ್ಪ ಅವರು ಭಾಗವಹಿಸಿದ್ದಾಗಿ ಅವರು ತಿಳಿಸಿದರು.

ಶ್ರೀನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ದಂಡಿಯಾತ್ರೆ ಎಂದರೆ ಪ್ರಪಂಚವೇ ಬೆಚ್ಚಿ ಬೆರಗಾಗಿಸಿವಂತದ್ದು, ಜನಾಂಗಗಳನ್ನು ಒಗ್ಗೂಡಿಸುವ ಕೆಲಸ ಈ ದಂಡಿಯಾತ್ರೆ ಮಾಡಿತು. ಗಾಂಧೀಜಿ ಮತ್ತು ಅಂಬೇಡ್ಕರ್ ಅವರು ಈ ದೇಶದ ಎರಡು ಕಣ್ಣುಗಳಿದ್ದಂತೆ. ಮೂಲ ಶಿಕ್ಷಣದಿಂದ ಸರ್ವಾಂಗೀಣ ಬೆಳವಣಿಗೆಯ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಹಾರೈಸಿದರು.

ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಸಂತೋಷ್ ಪಟೇಲ್ ಇದ್ದರು. ಭಾಗ್ಯ ಮತ್ತು ತಂಡದವರು ಪ್ರಾ ಇತಿಸಿದರು. ಬಿ. ಮನು ಸ್ವಾಗತಿಸಿದರು. ಕೆ. ಚೈತ್ರಾ ವಂದಿಸಿದರು. ಎಂ. ಪರಿಮಳಾ ನಿರೂಪಿಸಿದರು.