ಚಿರಂತನದಿಂದ ಶಿವಭಕ್ತಿ ಬಿಂಬಿಸುವ ನೃತ್ಯ ಪ್ರದರ್ಶನ ಕಾರ್ಯಕ್ರಮ ಇಂದುವಿನಾಯಕ ಎಜುಕೇಶನ್ ಟ್ರಸ್ಟ್ ಅಥಣಿ ಹಾಗೂ ಎಸ್‌ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಅಥಣಿ ಸ್ನಾತಕೋತ್ತರ ಕೇಂದ್ರ, ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಹಾಗೂ ಚಿರಂತನ ಅಕಾಡೆಮಿ ಆಶ್ರಯದಲ್ಲಿ ದಾವಣಗೆರೆಯ ಸಂಗೀತ ನೃತ್ಯ ಪ್ರತಿಭೆಗಳಿಗೆ ಫೆ.26ರ ಮಹಾಶಿವರಾತ್ರಿಯಂದು ನಗರದ ಅಥಣಿ ಕಾಲೇಜಿನ ಆವರಣದಲ್ಲಿ ನಡೆಯುವ ಶಿವರಾತ್ರಿ ಉತ್ಸವದಲ್ಲಿ ವೇದಿಕೆಯ ಅವಕಾಶ ದೊರೆಯಲಿದೆ ಎಂದು ಚಿರಂತನ ಸಂಸ್ಥೆ ಅಧ್ಯಕ್ಷೆ ದೀಪಾ ಎನ್. ರಾವ್ ಹೇಳಿದ್ದಾರೆ.