ಪರಿಭಾವಿತ ಅರಣ್ಯ ವಿಚಾರ ರಾಜ್ಯ ಸರ್ಕಾರ ಕೈಬಿಡಲು ಆಗ್ರಹ

| Published : Dec 02 2024, 01:17 AM IST

ಸಾರಾಂಶ

ಅರಣ್ಯ ಭೂಮಿಗಳ ಸಮಗ್ರ ದಾಖಲೀಕರಣಕ್ಕಾಗಿ ಅಧ್ಯಯನ ಸರಿ. ಆದರೆ ಪರಿಭಾವಿತ ಅರಣ್ಯದ ಅಧ್ಯಯನ ಸರಿಯಲ್ಲ ಎನ್ನುವುದು ಸರಿಯಲ್ಲ.

ಕನ್ನಡಪ್ರಭವಾರ್ತೆ ವಿರಾಜಪೇಟೆ

ರಾಜ್ಯದ ಅರಣ್ಯ ಭೂಮಿಗಳ ಸಮಗ್ರ ದಾಖಲೀಕರಣಕ್ಕಾಗಿ ಅಧ್ಯಯನ ಸರಿ. ಆದರೆ ಪರಿಭಾವಿತ ಅರಣ್ಯದ ಅಧ್ಯಯನ ಎನ್ನುವುದು ಸರಿಯಲ್ಲಾ. ಪರಿಭಾವಿತ ಅರಣ್ಯ /ಡೀಮ್ಡ್ ಫಾರೆಸ್ಟ್ ವಿಚಾರವೇ ನಿಯಮಬಾಹಿರವಾಗಿದೆ ಎಂದು ಕರ್ನಾಟಕ ಕಾಫಿ ರೈತರ ಸಂಘ ಕೊಡಗು ಜಿಲ್ಲಾ ಘಟಕ ಆರೋಪಿಸಿದೆ.

ಕರ್ನಾಟಕ ಕಾಫಿ ರೈತ ಸಂಘ ಸಿ.ಎಫ್.ಎಫ್,ಐ ಗೆ ನೊಂದಾಯಿತ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳು ವಿರಾಜಪೇಟೆಯ ಕಚೇರಿಯಲ್ಲಿ ಪರಭಾವಿತ ಅರಣ್ಯ/ಡೀಮ್ಡ್ ಫಾರೆಸ್ಟ್ ನ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದರು.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೊಡಗು ಘಟಕದ ಸದಸ್ಯರಾದ ಡಾ. ದುರ್ಗಾಪ್ರಸಾದ್ ಅವರು, ಪರಿಭಾವಿತ ಅರಣ್ಯ/(ಡೀಮ್ಡ್ ಫಾರೆಸ್ಟ್) ದ ವಿಚಾರವೇ ನಿಯಮಬಾಹಿರ ಎಂದು ರಾಜ್ಯದ ಉಚ್ಚ ನ್ಯಾಯಾಲಯ ತೀರ್ಪು ನೀಡಿ ಪುನರ್ ಉಚ್ಚರಿಸಿದೆ. ನಂತರವೂ ಈ ವಿಚಾರದೊಂದಿಗೆ ರಾಜ್ಯ ಸರ್ಕಾರ ಮುಂದುವರೆಯುತ್ತಿರುವುದು ನ್ಯಾಯಾಲಯದ ತೀರ್ಪಿನ ಉಲ್ಲಂಘನೆಯಾಗಿದೆ. ರಾಜ್ಯ ಸರ್ಕಾರವು ನ್ಯಾಯಾಲಯದ ತೀರ್ಪುನ್ನು ಕಡೆಗಣಿಸುತ್ತಿದೆ. ಸರ್ಕಾರದ ಈ ವರ್ತನೆಯೇ ಸಿ. ಅಂಡ್ ಡಿ, ಕೃಷಿಗೆ ಯೋಗ್ಯವಲ್ಲದ ಭೂಮಿ, ವಿಭಾಗದ ಜಮೀನಿಲ್ಲಿರುವ ಜನರು ಇಂದು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ ಎಂದು ಆರೋಪಿಸಿದರು.

ಧನಂಜಯ ಮತ್ತು ಕರ್ನಾಟಕ ರಾಜ್ಯ ಸರ್ಕಾರ ಮತ್ತಿತರ ನಡುವಿನ ಮೊಕದ್ದಮೆಯಲ್ಲಿ 2019 ರ ಜೂನ್ 12 ರಂದು ಕೊಟ್ಟ ತೀರ್ಪಿನಲ್ಲಿ ಡೀಮ್ಡ್ ಫಾರೆಸ್ಟ್ ಕುರಿತಂತೆ ರಾಜ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಪರಿಭಾವಿತ ಅರಣ್ಯದ ವಿಚಾರವು ಕೇವಲ ಅಧಿಕಾರಿಗಳ ಕಲ್ಪನೆ ಎಂದು ಅದಕ್ಕೆ ನಿಯಮದ ಬಲವಿಲ್ಲ ಎಂದು ಹೇಳಿ ಸ್ಪಷ್ಟ ತೀರ್ಪುನ್ನು ನೀಡಿದೆ.

ಅರಣ್ಯ ಸಂರಕ್ಷಣಾ ಕಾಯಿದೆ 1980 ರಲ್ಲಿ ಡೀಮ್ಡ್ ಫಾರೆಸ್ಟ್ ಪರಿಕಲ್ಪನೇ ಇಲ್ಲ. ಹಾಗಾಗಿ ಸರ್ಕಾರದ ಡೀಮ್ಡ್ ಫಾರೆಸ್ಟ್ ವ್ಯಾಖ್ಯಾನವನ್ನು ಒಪ್ಪಲಾಗದು ಎಂದು ರಾಜ್ಯದ ಉಚ್ಚ ನ್ಯಾಯಾಲಯವು 2022 ರಲ್ಲಿ ಪುನರ್ ಉಚ್ಚರಿಸಿತು.

2022 ರ ಜೂನ್ 21 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಅರೆನೂರು ಗ್ರಾಮದ ಡಿ.ಎಂ ದೇವೇಗೌಡ ಸಲ್ಲಿಸಿದ ಅರ್ಜಿಯ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ಮತ್ತು ನ್ಯಾ. ಅಶೋಕ್ ಕಿಣಗಿ ಅವರಿದ್ದ ವಿಭಾಗೀಯ ಪೀಠವು ಡಬ್ಲ್ಯುಯು .ಪಿ. ನಂ 54476/ 2016 ( ಜಿ.ಎಂ-ಎಂ.ಎಂ-ಎಸ್) ಸಿ/ಡಬ್ಲಯು. ಡಬ್ಲಯು.ಪಿ ನಂ. 51135/2016 ರಲ್ಲಿ ಅರಣ್ಯ ಭೂಮಿ ಅಥವಾ ಅರಣ್ಯ ಪ್ರದೇಶವಾಗಿದೆ. ಪರಿಭಾವಿತ ಭೂಮಿ ಎಂದು ಪರಿಗಣಿಸಲಾಗುವುದಿಲ್ಲಾ ಎಂದು ಉಚ್ಚ ನ್ಯಾಯಾಲಯವು ತೀರ್ಪು ನೀಡಿತು. ಇಲ್ಲಿ ಎರಡು ಭಾರಿ ರಾಜ್ಯ ಉಚ್ಚ ನ್ಯಾಯಾಲಯವು ತೀರ್ಪು ನೀಡಿದ್ದರೂ ಸರ್ಕಾರವು (ಡೀಮ್ಡ್ ಫಾರೆಸ್ಟ್) ಪರಿಭಾವಿತ ಅರಣ್ಯ ಎಂದು ವಾದಿಸಿಕೊಂಡು ಬರುತ್ತಿದೆ. ಇದರಲ್ಲಿ ನ್ಯಾಯಾಲಯದ ತೀರ್ಪುನ್ನು ಸರ್ಕಾರವು ಉಲ್ಲಂಘಿಸಿದೆ ಎಂದು ಆರೋಪಿಸಿದರು.

ಪರಿಭಾವಿತ, ಅರಣ್ಯ ವಿಚಾರವನ್ನು ಕೈಬಿಟ್ಟಾಗ ಅದರ ಹೆಸರಿನಲಿದ್ದ ಸಿ. ಅಂಡ್ ಡಿ. ಭೂಮಿ, ಪೈಸಾರಿ ಮೊದಲಾದ ವಿಭಾಗ ಭೂಮಿಗಳು ಅರಣ್ಯ ಪಟ್ಟಿಯಿಂದ ಸ್ವತಂತ್ರವಾಗುತ್ತೆ. ಇಲ್ಲಿ ವಾಸಿಸುವ ಜನರ ಓಡೆತನದ ಹಕ್ಕಿನ ಬಗ್ಗೆ ಪ್ರಶ್ನೆಯನ್ನು ಸಕಾಲದಲ್ಲಿ ಪರಿಹರಿಸಲು ಸಾಧ್ಯವಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ 7,500 ಎಕ್ರೆ ಅರಣ್ಯ ಪ್ರದೇಶವನ್ನು ಖಾಸಗಿಯವರಿಗೆ ಲೀಸ್ ಗೆ ಕೊಡಲಾಗಿತ್ತು. ಲೀಸ್ ಅವಧಿ ಮುಗಿದ ಭೂ ಪ್ರದೇಶವನ್ನು ಸರ್ಕಾರ ಮರಳಿ ಪಡೆಯಬೇಕು ಅಲ್ಲದೆ. ವಶಕ್ಕೆ ಪಡೆದಿರುವ ಭೂಮಿಯನ್ನು ಅರಣ್ಯ ಪ್ರದೇಶವಾಗಿ ಮಾರ್ಪಟು ಮಾಡಬೇಕು.

ಕೊಡಗಿನಲ್ಲಿ ಪೈಸಾರಿ ಜಾಗಗಳ ಸಮಗ್ರ ಸರ್ವೆ ನಡೆಸಬೇಕು, ದೊಡ್ಡ ಭೂ ಹಿಡವಳಿದಾರಲ್ಲಿ ಹೊಂದಿರಬಹುದಾದ ಭೂಮಿಯನ್ನು ಕಂಡುಹಿಡಿದು ಸರ್ಕಾರದ ವಶಕ್ಕೆ ಪಡೆಯಬೇಕು, ವಶಕ್ಕೆ ಪಡೆದಿರುವ ಭೂಮಿಯನ್ನು ನಿವೃತ್ತ ಸೈನಿಕರಿಗೆ, ಭೂ ರಹಿತರಿಗೆ, ಪರಿಶಿಷ್ಟ, ಪಂಗಡ ಪರಿಶಿಷ್ಟ ಜಾತಿ ವರ್ಗದವರಿಗೆ, ತೋಟದ ಕಾರ್ಮಿಕರಿಗೆ ಭೂರಹಿತರೆಲ್ಲರಿಗೆ ಹಂಚುವಂತಾಗಬೇಕು ಎಂದು ಕರ್ನಾಟಕ ಕಾಫಿ ರೈತರ ಸಂಘ ಸರ್ಕಾರವನ್ನು ಒತ್ತಾಯ ಮಾಡುತ್ತದೆ. ನ್ಯಾಯಾಲಯದ ಆದೇಶದಂತೆ ಪರಿಭಾವಿತ ಅರಣ್ಯ (ಡೀಮ್ಡ್ ಫಾರೆಸ್ಟ್) ಪರಿಕಲ್ಪನೆಯನ್ನು ಸರ್ಕಾರವು ಕೈಬಿಡುವಂತೆ ಆಗ್ರಹಿಸುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ಕಾಫಿ ರೈತರ ಸಂಘ ಕೊಡಗು ಜಿಲ್ಲಾ ಘಟಕದ ಸಂಚಾಲಕರಾದ ಕೆ.ಎಚ್. ಹನೀಫ್ ಚಾಮಿಯಾಲ, ಉದಯ ಕುಮಾರ್ ನೆಲ್ಯಹುದಿಕೇರಿ, ಹಮೀದ್ ಗುಂಡಿಕೆರೆ ಉಪಸ್ಥಿತರಿದ್ದರು.