ಪಂಚಮಸಾಲಿ ಪೀಠಕ್ಕೆ ಶೀಘ್ರವೇ ಹೊಸ ಶ್ರೀಗಳು: ಕಾಶಪ್ಪನವರಕೂಡಲ ಸಂಗಮದ ಪಂಚಮಸಾಲಿ ಪೀಠಕ್ಕೆ ರಾತ್ರೋರಾತ್ರಿ ಬೀಗ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಕೂಡಲ ಸಂಗಮ ಪಂಚಮಸಾಲಿ ಪೀಠದ ಟ್ರಸ್ಟ್ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ನಡುವಿನ ಜಟಾಪಟಿ ಇದೀಗ ಪೀಠಾಧ್ಯಕ್ಷರ ಬದಲಾವಣೆಗೆ ತಿರುಗಿದೆ.