6 ತಿಂಗಳ ವೇತನ ಬಿಡುಗಡೆಗೆ ಆಗ್ರಹಿಸಿ ನರೇಗಾ ನೌಕರರು ಅಸಹಕಾರ ಚಳವಳಿಕಳೆದ 6 ತಿಂಗಳ ವೇತನ ಪಾವತಿ, ಸೇವಾ ಭದ್ರತೆ, ಆರೋಗ್ಯ ವಿಮೆ, ಕೆಲಸದ ಸ್ಥಳದಲ್ಲಿ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಭೇಡಿಕೆಗಳನ್ನು ಈಡೇರಿಸುವಂತೆ ನರೇಗಾ ಹೊರಗುತ್ತಿಗೆ ನೌಕರರು ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಸೋಮವಾರ ತಾಪಂ ಕಚೇರಿ ಮುಂಭಾಗ ಅಸಹಕಾರ ಚಳವಳಿ ನಡೆಸಿದರು.