ಇ-ಪೌತಿ ಖಾತೆ ಆಂದೋಲನ ಸದುಪಯೋಗಕ್ಕೆ ತಹಸೀಲ್ದಾರ್ ಕರೆಎರಡು ಮೂರು ತಲೆಮಾರುಗಳಿಂದ ಮುತ್ತಾತ, ತಾತ, ತಂದೆಯ ಹೆಸರಿನಲ್ಲಿರುವ ಭೂಮಿಯ ಹಕ್ಕನ್ನು ಮಕ್ಕಳಿಗೆ ಅಥವಾ ವಾರಸುದಾರರಿಗೆ ಕಾನೂನಾತ್ಮಕವಾಗಿ ವರ್ಗಾವಣೆಯಾಗಿರುವುದಿಲ್ಲ. ಇದರಿಂದ ಜನರಿಗೆ ಸರ್ಕಾರದ ಯಾವುದೇ ಸೌಲತ್ತುಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಇ ಪೋತಿ ಖಾತೆ ಆಂದೋಲನದ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕೆಂದು ಮುಂಡರಗಿ ತಹಸೀಲ್ದಾರ್ ಎರಿಸ್ವಾಮಿ ಪಿ.ಎಸ್. ಹೇಳಿದರು.