ಅಧಿಕಾರಿ ಶಾಸಕರ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ ಎಂದರೆ ಹೇಗೆ ?ಮುಂಡರಗಿಯಿಂದ ಶಿರಹಟ್ಟಿಗೆ ತೆರಳುವಾಗ ಬಾಗೇವಾಡಿ ಹತ್ತಿರವಿರುವ ಕಣವಿ ದುರ್ಗಮ್ಮನ ದೇವಸ್ಥಾನಕ್ಕೆ ಮಂಗಳವಾರ ಹಾಗೂ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು, ರಾತ್ರಿ ವೇಳೆಯಲ್ಲಿ ಕತ್ತಲೆಯಾಗುವುದರಿಂದ ಜನರ ಅನುಕೂಲಕ್ಕಾಗಿ ಅಲ್ಲಿ ವಿದ್ಯುತ್ ಹಾಕುವಂತೆ ಹೆಸ್ಕಾಂ ಇಲಾಖೆ ಅಧಿಕಾರಿಗೆ 50 ಬಾರಿ ಮಾತನಾಡಿದರೂ ಈ ಬಗ್ಗೆ ಯಾವುದೇ ರೀತಿ ಕೆಲಸ ಮಾಡಿಲ್ಲ. ಅಧಿಕಾರಿ ಶಾಸಕರ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ ಎಂದರೆ ಹೇಗೆ ? ನಾವು ಸಾರ್ವಜನಿಕರಿಗೆ ಏನು ಹೇಳಬೇಕು ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಆಕ್ರೋಶ ವ್ಯಕ್ತ ಪಡಿಸಿದರು.