ತ್ರಿವಿಧ ದಾಸೋಹದ ನೆಲೆವೀಡು ಹಾರಕೂಡ ಮಠ

| Published : Jan 04 2025, 12:32 AM IST

ಸಾರಾಂಶ

ಹಾರಕೂಡ ಮಠವು ಧಾರ್ಮಿಕ ಕಾರ್ಯಕ್ಕೆ ಅಷ್ಟೇ ಒಳಗಾಗದೇ ಅಕ್ಷರ-ಅನ್ನ-ಸಾಹಿತ್ಯ-ಕಲೆ- ಧರ್ಮಗಳಂತ ಪಂಚ ಭಾಗ್ಯಗಳನ್ನು ಕೊಡುವ ಮೂಲಕ ನಿಜವಾದ ಸರ್ವಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸುತ್ತಿದೆ.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ ಮಠಗಳು ಧಾರ್ಮಿಕ, ಶೈಕ್ಷಣಿಕ, ದಾಸೋಹ, ಸಾಹಿತ್ಯ ಕಲೆ, ಸಂಸ್ಕೃತಿ, ಸಾಂಸ್ಕೃತಿಕವಾಗಿ ಮುಂದೆ ಬಂದು ಸಮಾಜ, ಆ ಪ್ರದೇಶದ ಜನ ಸಮುದಾಯದ ಕೇಂದ್ರಗಳಾದವು. ಅವುಗಳಲ್ಲಿ ಕಲ್ಯಾಣ ಕರ್ನಾಟಕದ ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಚಿಕ್ಕ ಗ್ರಾಮ ಹಾರಕೂಡದ ಶ್ರೀ ಚನ್ನಬಸವೇಶ್ವರ ಹಿರೇಮಠ ಸಂಸ್ಥಾನ ಒಂದು. ಕರ್ನಾಟಕ ಇತಿಹಾಸ, ಚರಿತ್ರೆಯನ್ನು ತಗೆದಾಗ ಹಿಂದಿನ ದಿನಮಾನಗಳಲ್ಲಿ ಹಳ್ಳಿಹಳ್ಳಿಗಳಲ್ಲಿ ಹಿರೇಮಠ ಮಠಗಳ ಪಾತ್ರ ಗಣನೀಯ. ಗಾಂವಠಿ ಶಾಲೆಗಳಲ್ಲಿ ಅಕ್ಷರ ಕಲಿಕೆ, ಪ್ರಸಾದ, ದಾಸೋಹದ ಮೂಲಕ ಊಟ,ವಸತಿ ನೀಡಿ ಅದಕ್ಕೊಂದು ಆಯಾಮ ನೀಡಿದರು. ಇಂತಹ ಮಠದ ಪರಂಪರೆಯಲ್ಲಿ ಸಂಗನ ಬಸವ ಸ್ವಾಮಿಗಳು ಮೂಲ ಪುರುಷರಾಗಿ ಕಂಡು ಬರುವರು. ಅವರ ನಂತರದಲ್ಲಿ ಸಿದ್ಧಲಿಂಗ ಸ್ವಾಮಿಗಳು, ಚೆನ್ನವೀರ ಸ್ವಾಮಿಗಳು, ಬಸವಲಿಂಗ ಸ್ವಾಮಿಗಳು, ಎರಡನೆಯ ಸಂಗನಬಸವ ಸ್ವಾಮಿಗಳು, ಚೆನ್ನಬಸವ ಶಿವಯೋಗಿಗಳು, ಗುರುಲಿಂಗ ಶಿವಾಚಾರ್ಯರು ಏಳು ಜನ ಪೀಠಾಧಿಪತಿಗಳಾಗಿ ನಂತರ ಬಂದವರು ಈಗೀನವರಾದ ಡಾ.ಚೆನ್ನವೀರ ಶಿವಾಚಾರ್ಯರು.ಆರನೆಯ ಪೀಠಾಧಿಪತಿಗಳಾಗಿದ್ದ ಪೂಜ್ಯ ಚೆನ್ನಬಸವ ಶಿವಯೋಗಿಗಳವರಿಂದ ಮಠದ ಕೀರ್ತಿ ಉತ್ತುಂಗ ಶಿಖರವೇರಿತು. ಆರಾಧ್ಯ ದೈವರಾಗಿ, ಈ ಭಾಗದ ಪುಣ್ಯ ಪುರುಷರಾಗಿ ನಡೆದಾಡುವ ದೇವರಾದರು. ಅವರ ಮಾತೇ ಮಂತ್ರವಾಗಿದ್ದವು. ಹೀಗಾಗಿ ಅವರ ಹೆಸರಲ್ಲಿ ಜಾತ್ರೆ, ಹಬ್ಬ, ಹರಿದಿನ ನಡೆಯುತ್ತವೆ. ನಂತರ ಬಂದ ಪೂಜ್ಯ ಶ್ರೀ ಗುರುಲಿಂಗ ಶಿವಾಚಾರ್ಯರರು ಧರ್ಮ, ಆಧ್ಯಾತ್ಮ ಜೊತೆ ಕಲೆ ಸಂಸ್ಕೃತಿಗೆ ಒತ್ತು ನೀಡಿದರು. ಇವರ ನಂತರ ಈಗಿನ ಎಂಟನೆಯ ಪೀಠಾಧಿಪತಿಗಳು ಇಡೀ ಮನೆಯನ್ನು ಮಠವನ್ನಾಗಿ ಪರಿವರ್ತಿಸಿ ಮಹಾಮಠವಾಗಿಸಿದ ಕೀರ್ತಿಗೆ ಭಾಜನರಾಗಿರುವರು.ಪರಂಪರೆಗೆ ಎರಕ ಹೊಯ್ದವರು:ಹಾರಕೂಡ ಮಠವು ಧಾರ್ಮಿಕ ಕಾರ್ಯಕ್ಕೆ ಅಷ್ಟೇ ಒಳಗಾಗದೇ ಅಕ್ಷರ-ಅನ್ನ-ಸಾಹಿತ್ಯ-ಕಲೆ- ಧರ್ಮಗಳಂತ ಪಂಚ ಭಾಗ್ಯಗಳನ್ನು ಕೊಡುವ ಮೂಲಕ ನಿಜವಾದ ಸರ್ವಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸುತ್ತದೆ. ಹಾರಕೂಡ ಮಠ ಮೊದಲಿನಿಂದ ಇಲ್ಲಿ ಬಂದ ಪೀಠಾಧಿಪತಿಗಳು ಸಮನ್ವಯತೆಯ ಪರಂಪರೆ ಹಾಕಿದರು. ಲಿಂ.ಚನ್ನಬಸವ ಶಿವಯೋಗಿಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ದೊಡ್ಡ ಶಕ್ತಿ ತುಂಬಿದರು. ಪಟ್ಟಾಧಿಕಾರ ಮಹೋತ್ಸವ:

1999ರ ಏಪ್ರಿಲ್ 24ರಂದು ಪಟ್ಟಾಧಿಕಾರ ವಹಿಸಿಕೊಂಡು ಕಿರಿಯ ವಯಸ್ಸಿನಲ್ಲೇ ಹಿರಿದಾದ ಭಾರ ಹೊತ್ತವರು.ಅನೇಕ ಕಷ್ಟ, ಸಮಸ್ಯೆ, ಸವಾಲಿಗೆ ತಮ್ಮ ಶಾಂತಿ-ಪ್ರೀತಿಯಿಂದ ಎಲ್ಲ ಸಮಸ್ಯೆ ಪರಿಹರಿಸುವಲ್ಲಿ ಸಫಲರಾದರು. ಅವರು ಲಿಫ್ಟ್ನಲ್ಲಿ ಏರಿ ಹೋಗದೆ ಸ್ಟೆಪ್ ದಿಂದ ಏರಿ ಬಂದವರು.ಹೀಗಾಗಿ ಅವರ ಶ್ರಮ ನಾವಿಲ್ಲಿ ಕಾಣಬಹುದು.ತ್ರಿವೇಣಿ ಸಂಗಮ:

ಹಾರಕೂಡ ಮಠವು ಧಾರ್ಮಿಕ ಕಾರ್ಯಕ್ಕೆ ಅಷ್ಟೇ ಒಳಗಾಗದೇ ಅಕ್ಷರ- ಅನ್ನ- ಸಾಹಿತ್ಯ- ಕಲೆ- ಧರ್ಮಗಳಂತ ಪಂಚಭಾಗ್ಯಗಳನ್ನು ಕೊಡುವ ಮೂಲಕ ನಿಜವಾದ ಸರ್ವಜನಾಂಗದ ತೋಟವಾಗಿ ಕಂಗೊಳಿಸುತ್ತದೆ. ಹಾರಕೂಡ ಮಠ ವೀರಶೈವ, ಪಂಚಾಚಾರ್ಯ ಮಠವಾದರು ಮೊದಲಿನಿಂದ ಇಲ್ಲಿ ಬಂದ ಪೀಠಾಧಿಪತಿಗಳು ಸಮನ್ವಯತೆಯ ಪರಂಪರೆ ಹಾಕಿದರು. ಲಿಂ. ಚನ್ನಬಸವ ಶಿವಯೋಗಿಗಳು ಇಡಿ ಭಾಗಕ್ಕೆ ದೊಡ್ಡ ಶಕ್ತಿ ತುಂಬಿದರು. ಅವರ ಮಾತೇ ಮಂತ್ರವಾಗಿದ್ದವು. ಅಪಾರ ತಪಸ್ವಿಗಳು.ಅವರಿಂದಲೇ ಮಠದ ಜನಪ್ರಿಯತೆ ಹೊಂದಿತು. ನಂತರದಲ್ಲಿ ಗುರುಲಿಂಗ ಶಿವಾಚಾರ್ಯರು ಪೀಠಕ್ಕೆ ಬಂದಾಗಲೇ ಹಸಿದು ಬಂದವರಿಗೆ ಆಶ್ರಯ,ಅನ್ನದಾನಕ್ಕೆ ಹೆಸರಾದರು. ಈಗೀರುವ ಎಂಟನೆಯ ಪೀಠಾಧಿಪತಿಗಳಾದ ಡಾ.ಚೆನ್ನವೀರ ಶಿವಚಾರ್ಯರು ಇವರಿಬ್ಬರ ಮತ್ತು ತಮ್ಮ ಶಕ್ತಿ ಬಳಸಿ ತ್ರಿವೇಣಿ ಸಂಗಮದ ಜ್ಯೋತಿಯಾಗಿ ಬೆಳಗುತ್ತಿದ್ದಾರೆ. ಅನೇಕ ಸಾಹಿತಿ ಕಲಾವಿದರನ್ನು ಮುಗ್ಧ ಮಕ್ಕಳನ್ನು ಪೋಷಿಸಿ ಬೆಳೆಯಿಸುತ್ತಿರುವುದರಿಂದ ಈ ಮಠದ ಕೀರ್ತಿ ಇಮ್ಮಡಿಗೊಳಿಸಿದ್ದಾರೆ ಇದಕ್ಕೆಲ್ಲಾ ಕಾರಣ ಲಿಂ.ಚೆನ್ನಬಸವ ಶಿವಯೋಗಿಗಳ ತಪಸ್ಸಿನ ಶಕ್ತಿ ಅವರು ದುಡಿದ ಶ್ರಮದಿಂದಾಗಿ ಕಲ್ಯಾಣ ಕರ್ನಾಟಕದ ಬಹುದೊಡ್ಡ ಜಾತ್ರೆಗಳಲ್ಲಿ ಇದೊಂದು ಜಾತ್ರೆಯಾಗಿದೆ .ಈ ಸಂದರ್ಭದಲ್ಲಿ ಇಲ್ಲಿ ನಡೆಯುವ ಶಿವಾನುಭಾವ ಗೋಷ್ಠಿ ಮತ್ತು ಪೈಲ್ವಾನರ ಕುಸ್ತಿ ಬೃಹತ್ತ ಗ್ರಂಥಗಳ ಬಿಡುಗಡೆ ಕಾರ್ಯಕ್ರಮಗಳು ರಾಷ್ಟ್ರದ ಗಮನ ಸೆಳೆಯುತ್ತಿರುವುದರಿಂದ ಈ ಜಾತ್ರೆಯ ಮಹತ್ವ ಹೆಚ್ಚಿದೆ.