ಕೊಣನೂರಿನಲ್ಲಿ ಗಣರಾಜ್ಯೋತ್ಸವ ಆಚರಣೆಕೊಣನೂರಿನ ಎಲ್ಲಾ ಸರ್ಕಾರಿ, ಖಾಸಗಿ ಶಾಲಾ ಕಾಲೇಜು, ಗ್ರಾಮ ಪಂಚಾಯತಿ ಆವರಣ, ಆರೋಗ್ಯ, ಪೊಲೀಸ್ ಇಲಾಖೆಗಳಲ್ಲಿ, ಕಂದಾಯ ಇಲಾಖೆ, ಪತ್ತಿನ ಸಹಕಾರ ಸಂಘ ಮುಂತಾದೆಡೆಗಳಲ್ಲಿ 76ನೇ ವರ್ಷದ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. ಸರ್ಕಾರಿ ಇಲಾಖೆಯವರು ಗ್ರಾಮಪಂಚಾಯತಿ ಆವರಣದಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಗಮಿಸಿದರು. ಕೊಣನೂರು ಪಂಚಾಯತಿ ಆವರಣದಲ್ಲಿ ಗ್ರಾ.ಪಂ ಅಧ್ಯಕ್ಷೆ ಮಿಸ್ಬಾ ರಿಜ್ವಾನ್ ಧ್ವಜಾರೋಹಣ ನೆರವೇರಿಸಿದರು.