ಆಡಿಯೋ ನನ್ನದಲ್ಲ ಎಂದ ಶಾಸಕ ಶಿವಲಿಂಗೇಗೌಡನಮ್ಮ ವಕೀಲರೊಂದಿಗೆ ಚರ್ಚಿಸಿ ನಕಲಿ ಆಡಿಯೋ ಬಗ್ಗೆ ಪೊಲೀಸರಿಗೆ ದೂರು ನೀಡುವ ಬಗ್ಗೆ ಶೀಘ್ರ ನಿರ್ಧರಿಸುವೆ. ಜೆಡಿಎಸ್-ಬಿಜೆಪಿಯವರು ದೂರು ಕೊಡಲಿ, ಯಾವುದೇ ತನಿಖೆಯಾದ್ರೂ ನಡೆಯಲಿ, ಅದು ನನ್ನ ದನಿಯಲ್ಲ ಎಂದ ಮೇಲೆ ಹೆದರುವ ಪ್ರಶ್ನೆ ಇಲ್ಲ. ತನಿಖೆ ಎದುರಿಸುವೆ. ನಾನು ಯಾವುದೇ ತಪ್ಪು ಮಾಡಿಲ್ಲ. ಆಡಿಯೋಗೂ ನನಗೂ ಸಂಬಂಧ ಇಲ್ಲ. ಕುತಂತ್ರದಿಂದ, ರಾಜಕೀಯವಾಗಿ ನನ್ನ ತುಳಿದು ಶಕ್ತಿ ಕುಂದಿಸಲು, ಜನರ ಪ್ರೀತಿ-ವಿಶ್ವಾಸ ಕಡಿಮೆ ಮಾಡಲು ಹೀಗೆ ಮಾಡಲಾಗುತ್ತಿದೆ ಎಂದು ಶಾಸಕ ಶಿವಲಿಂಗೇಗೌಡ ತಿಳಿಸಿದ್ದಾರೆ.