ಕೋಳಿ ಅಂಗಡಿಗಳಿಗೆಲ್ಲಾ ಒಂದೇಕಡೆ ವ್ಯವಸ್ಥೆಬೇಲೂರು ಪಟ್ಟಣದ ಹೊಳೆಬೀದಿಯಲ್ಲಿ ಕೋಳಿ ಅಂಗಡಿಗಳ ಸಂಖ್ಯೆ ಮಿತಿ ಮೀರುತ್ತಿದ್ದು ವಾಸ ಮಾಡಲು ತೊಂದರೆಯಾಗುತ್ತಿದೆ, ಕೋಳಿ ಅಂಗಡಿಗಳ ತೆರವುಗೊಳಿಸಬೇಕೆಂದು ನಿವಾಸಿಗಳು ನೀಡಿದ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಈಗ ಇರುವ ಅಂಗಡಿಗಳ ಮಾಲೀಕರಿಗೆ ಶುಚಿತ್ವ ಕಾಪಾಡುವಂತೆ ಸೂಚಿಸಲಾಗುವುದು, ಇನ್ನುಮುಂದೆ ಯಾವುದೇ ಅಂಗಡಿಗೆ ಪರವಾನಗಿ ನೀಡುವುದಿಲ್ಲ, ಯಗಚಿ ಸೇತುವೆ ಅಕ್ಕಪಕ್ಕದಲ್ಲಿ ಪುರಸಭೆಯ ಸ್ಥಳ ಇರುವ ಬಗ್ಗೆ ಮಾಹಿತಿ ಇದ್ದು, ಅಲ್ಲಿ ಮಳಿಗೆಗಳ ನಿರ್ಮಿಸಬಹುದೆ ಅಥವಾ ಬಾಡಿಗೆ ಪಡೆದು ನೀಡಬಹುದೆ ಎಂಬುದನ್ನು ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪುರಸಭೆ ಅಧ್ಯಕ್ಷರು ತಿಳಿಸಿದರು.