• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಬಾಲಕಾರ್ಮಿಕ ಪದ್ಧತಿ ಸಂಪೂರ್ಣ ಅಂತ್ಯವಾಗಬೇಕು
ಬಾಲಕಾರ್ಮಿಕ ಪದ್ಧತಿ ಸಮಾಜದಲ್ಲಿ ಒಂದು ಕಳಂಕವಾಗಿದೆ. ಈ ವ್ಯವಸ್ಥೆಯಿಂದ ಮಕ್ಕಳನ್ನು ದೂರವಿಟ್ಟು ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಎಲ್ಲ ಜವಾಬ್ದಾರಿಯೊಂದಿಗೆ ಕರ್ತವ್ಯ ಕೂಡ ಆಗಿದೆ ಎಂದು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿರಣ್ ಕುಮಾರ್ ಡಿ.ವಡಿಗೇರಿ ಹೇಳಿದರು. ಬಾಲಕಾರ್ಮಿಕ ಎಂಬ ಪದ್ಧತಿ ಅನಿಷ್ಟ ಪದ್ಧತಿಯಾಗಿದ್ದು, ಇದನ್ನು ಕೊನೆಗಾಣಿಸಲು ಅನೇಕ ಕಠಿಣ ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದರು.
ಬೇಲೂರು ರಥೋತ್ಸವದಲ್ಲಿ ಕುರಾನ್‌ ಪಠಣ ನಿರ್ಬಂಧಿಸಲು ಮನವಿ
ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವ ದಿನದಂದು ಮುಸ್ಲಿಂ ಖಾಜಿಯವರಿಂದ ಕುರಾನ್ ಪಠಣವನ್ನು ನಿರ್ಬಂಧಿಸಬೇಕೆಂದು ರಾಮಧೂತ ಹಿಂದೂ ಸಮಾಜ ಹಾಗೂ ಶ್ರೀ ಚನ್ನಕೇಶವ ಸ್ವಾಮಿ ಭಕ್ತರ ವತಿಯಿಂದ ಶುಕ್ರವಾರ ತಾಲೂಕು ಆಡಳಿತಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು. ದೇಗುಲದ ಮ್ಯಾನ್ಯುಯಲ್‌ನಲ್ಲೂ ಸಹ ಕುರಾನ್ ಪಠಣಕ್ಕೆ ಅವಕಾಶ ಇಲ್ಲ. ಅವರಿಗೆ ಮರ್ಯಾದೆ ನೀಡಿ, ದೇವರಿಗೆ ವಂದನೆ ಸಲ್ಲಿಸಿ ತೆರಳುವ ಉಲ್ಲೇಖವಿದೆ. ಅದನ್ನು ಪಾಲಿಸಲಿ ಎಂದರು.
ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರ
ಮಧುಮೇಹ, ಬಿ.ಪಿ, ಸಂಧಿವಾತ, ನರಗಳ ಸೆಳೆತ, ಸ್ಪಾಂಡಿಲೈಟೀಸ್, ನಿದ್ರಾಹೀನತೆ, ಥೈರಾಯ್ಡ್, ಲಕ್ವಾ, ಬೆನ್ನು ನೋವು ಮುಂತಾದ ಸುದೀರ್ಘ ನೋವುಗಳಿಗೆ ಫೂಟ್ ಥೆರಪಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಡಾ.ರತ್ನಾಕರ ಶೆಟ್ಟಿ ತಿಳಿಸಿದರು. ನಿರ್ದಿಷ್ಟ ಯೋಜನೆಗಳನ್ನು ರೂಪಿಸಿ ಜನರಿಗೆ ಸೇವೆಗಳನ್ನು ತಲುಪಿಸುತ್ತಿರುವ ರೋಟರಿ ನಡೆಯನ್ನು ಸರ್ಕಾರವೂ ಅನುಸರಿಸಬೇಕಿದೆ ರೋಟರಿ ಕ್ಲಬ್ ಆಯೋಜಿಸಿದ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರದಲ್ಲಿ ಇದುವರೆಗೂ ೨೫೦೦ ಜನ ಚಿಕಿತ್ಸೆಯನ್ನು ಪಡೆದಿದ್ದಾರೆ ಎಂದು ತಿಳಿಸಿದರು.
ಸ್ತ್ರೀ ಶೋಷಣೆ ತಪ್ಪಿಸಲು ಹಲವು ಕಾನೂನು ಜಾರಿಯಲ್ಲಿವೆ
ಭಾರತದಲ್ಲಿ ಸ್ತ್ರೀಯರಿಗೆ ಗೌರವ ಹಾಗೂ ಉನ್ನತ ಸ್ಥಾನಮಾನ ನೀಡಿದ್ದು ೧೨ನೇ ಶತಮಾನದಲ್ಲಿ. ಬಸವಣ್ಣನವರು ಹಾಗೂ ಅಕ್ಕಮಹಾದೇವಿಯವರು ಹೆಣ್ಣು ಗಂಡು ಎಂಬ ತಾರತಮ್ಯ ಹೋಗಲಾಡಿಸಲು ಪ್ರಯತ್ನ ಮಾಡುವ ಜತೆಗೆ ಅರಿವನ್ನು ಮೂಡಿಸುತ್ತಿದ್ದರು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತ ಮಹಾಂತೇಶ್ ಮುನವಳ್ಳಿಮಠ್ ತಿಳಿಸಿದರು. ಸ್ತ್ರೀಯರಲ್ಲಿರುವ ವಿಶೇಷ ಗುಣವನ್ನು ಪರಿಗಣಿಸಿಯೇ ಪೂಜ್ಯನೀಯ ಸ್ಥಾನವನ್ನು ನೀಡಲಾಗಿದೆ. ಈ ಕಾರಣದಿಂದಲೇ ಜಗತ್ತಿನ ಎಲ್ಲ ಮಹತ್ವಗಳಿಗೆ ಸ್ತ್ರೀಗೆ ಹೋಲಿಸಲಾಗುತ್ತದೆ ಮತ್ತು ಭಾರತದಲ್ಲಿ ಸ್ತ್ರೀಯರ ಸ್ಥಾನಮಾನ ಉತ್ತಮವಾಗಿದೆ ಎಂದರು.
ಅಟಲ್‌ ಬಿಹಾರಿ ವಾಜಪೇಯಿ ಶ್ರೇಷ್ಠ ಮುತ್ಸದ್ದಿ
ಅಟಲ್ ವಿರಾಸತ್ ಹೆಸರಿನಲ್ಲಿ ಅಟಾಲ್ ಅವರ ಪ್ರತಿ ಜಿಲ್ಲೆಯಲ್ಲಿ ಬಿಜೆಪಿಯಲ್ಲಿದ್ದು, ಅವರ ಜೊತೆ ಕೆಲಸ ಮಾಡಿದ್ದರೂ ಹಾಗೂ ಹತ್ತಿರದಿಂದ ನೋಡಿದ್ದಾರೆ ಅವರನ್ನು ಸನ್ಮಾನಿಸಿ ಗೌರವಿಸುತ್ತಿದ್ದೇವೆ. ಅಟಲ್ ಜೀವನ ನೆನಪು ಮಾಡುವ, ಅವರ, ಜೀವನ, ವ್ಯಕ್ತಿತ್ವ ನಮ್ಮ ಮೇಲೆ ಜೀವಂತವಾಗಿ ಮಾಡಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಟಲ್ ಜೀವನದಲ್ಲಿ ಲಕ್ಷಾಂತರ ಘಟನೆ ನಡೆದಿದೆ. ಅವರಿಂದ ಪ್ರೇರಣೆಯನ್ನು ಕಾರ್ಯಕರ್ತರು ಪಡೆದಿದ್ದಾರೆ ಎಂದು ವಾಜಪೇಯಿ ಜನ್ಮ ಶತಾಬ್ಧಿ ಸಹ ಸಂಚಾಲಕ ಪಣೀಶ್ ಹೇಳಿದರು.
ಯಾವುದೇ ಕೆಲಸ ಮಾಡಲು ಕೌಶಲ್ಯಗಳು ಅತ್ಯವಶ್ಯಕ
ಹಲವಾರು ದೇಶಗಳಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಸೇವೆಗಳನ್ನು ಉಚಿತವಾಗಿ ಮಾಡಿಕೊಡಲಾಗುತ್ತಿದೆ. ನಮ್ಮ ದೇಶದಲ್ಲಿ ಇದರ ಬಗ್ಗೆ ಹೆಚ್ಚು ಗಮನ ವಹಿಸಿ ಬಡವರಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕು. ವಿದ್ಯಾರ್ಥಿಗಳಿಗೆ ವ್ಯಾಪಾರ ಮತ್ತು ಸೂಕ್ಷ್ಮ ಅರ್ಥಶಾಸ್ತ್ರದ ಪರಿಕಲ್ಪನೆಯು ಸಮಾಜಶಾಸ್ತ್ರದಲ್ಲಿ ಹೇಗೆ ಬೆಳಕಾಗುತ್ತದೆ ಮತ್ತು ಮನುಷ್ಯನಿಗೆ ಹಣ ಮಾಡುವುದರ ಬಗ್ಗೆ ಆಯಾಮ ಇರುವುದಿಲ್ಲ. ಇದರಿಂದ ದುರಾಸೆ ಎಂಬುದು ಹೆಚ್ಚಾಗಿ ದೇಶ ಹಾಳಾಗುವಂತಾಗಿದೆ ಎಂದು ಹ ಪ್ರಾಧ್ಯಾಪಕ ಡಾ. ಕೆ. ಬಾಷಾ ತಿಳಿಸಿದರು.
ನನ್ನ ರಕ್ಷಿಸಿ ಆಸ್ತಿ ಉಳಿಸಿಕೊಡಿ ಎಂದು ವೃದ್ಧೆ ಅಳಲು
ಗ್ರಾಮದಿಂದ ಓಡಿಸಿ ನನ್ನ ಆಸ್ತಿ ಲಪಾಟಿಯಿಸುವ ನಿಟ್ಟಿನಲ್ಲಿ ಅನೇಕ ದೇವರ ಕೈಮುಗಿದು ನನಗೆ ಹಿಂಸೆ ಕೊಡುತ್ತಿದ್ದು, ಸ್ಥಳಕ್ಕೆ ಅಧಿಕಾರಿಗಳು ಬಂದು ನ್ಯಾಯ ದೊರಕಿಸಿಕೊಡಬೇಕಾಗಿ ಹಾಗೂ ಜಮೀನನ್ನು ಬಿಡಿಸಿಕೊಡಬೇಕಾಗಿ ವೃದ್ಧೆ ಓರ್ವಳು ಡಿಸಿ ಕಚೇರಿ ಮುಂದೆ ತಹಸೀಲ್ದಾರಲ್ಲಿ ಮನವಿ ಮಾಡಿಕೊಂಡು ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ನಂತರ ಮಾನವೀಯತೆ ದೃಷ್ಠಿಯಲ್ಲಿ ಹಾಗೂ ನ್ಯಾಯಕೊಡಿಸುವುದಾಗಿ ಅರಸೀಕೆರೆ ತಹಸೀಲ್ದಾರ್ ಸಂತೋಷ್ ಅವರು ತಮ್ಮ ವಾಹನದಲ್ಲೆ ಕೂರಿಸಿಕೊಂಡು ಆಕೆಯ ಸ್ಥಳಕ್ಕೆ ಕರೆದೊಯ್ದರು.
ಶಾಸಕರ ಅಮಾನತು ಖಂಡಿಸಿ ಬಿಜೆಪಿ ಪ್ರತಿಭಟನೆ
ವಿಧಾನಸಭೆಯಿಂದ ೧೮ ಶಾಸಕರ ಅಮಾನತು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅನುದಾನ ದುರ್ಬಳಕೆ ಖಂಡಿಸಿ ನಗರದಲ್ಲಿ ಗುರುವಾರ ಕಾಂಗ್ರೆಸ್ ವಿರುದ್ಧ ಜಿಲ್ಲಾ ಬಿಜೆಪಿ ಪಕ್ಷದಿಂದ ಪ್ರತಿಭಟನೆ ನಡೆಸಿ ಅಮಾನತು ವಾಪಸ್ ಪಡೆಯುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು. ವಿಧಾನಸಭೆಯಲ್ಲಿ ಸಣ್ಣ ಕಾರಣಕ್ಕೆ ೧೮ ಜನ ಶಾಸಕರನ್ನು ರಾಜಕೀಯ ದುರುದ್ದೇಶದಿಂದ ೬ ತಿಂಗಳ ಕಾಲ ಅಮಾನತು ಮಾಡಿ ಸ್ಪೀಕರ್‌ ಆದೇಶ ಹೊರಡಿಸಿರುವುದು ಖಂಡನೀಯ ಎಂದರು.
ಜಾನಪದ ಕಲೆ ಉಳಿಸಲು ಯುವ ಪೀಳಿಗೆಗೆ ಅರಿವು ಮೂಡಿಸಿ
ಜಾನಪದ ಕಲೆ ಉಳಿಸುವ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಗೂ ವೈಡಿಡಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಹೆಬ್ಬಾಳು ಹಾಲಪ್ಪ ಹೇಳಿದರು. ಜೀವನದಲ್ಲಿ ಸಾಧನೆ ಮಾಡಿದ ಮಹನೀಯರು ಪ್ರೇರಣೆಯಾಗಬೇಕು, ಕಂಸಾಳೆ ಪದ, ಗೀಗಿಪದ, ಕೋಲಾಟದ ಪದ, ರಾಗಿ ಬೀಸೋ ಪದ, ಸುಗ್ಗಿ ಹಾಡುಗಳು, ಹೀಗೆ ಇನ್ನೂ ಅನೇಕ ವಿವಿಧ ಬಗೆಯ ಜಾನಪದ ಗೀತೆಗಳು ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು, ಕೌಟುಂಬಿಕ ಜೀವನವನ್ನು ತೆರೆದಿಡುತ್ತವೆ ಎಂದರು.
ಕಾಡಾನೆಗೆ ರೇಡಿಯೋ ಕಾಲರ್‌ ಅಳವಡಿಕೆ ಯಶಸ್ವಿ
ಮಲೆನಾಡು ಭಾಗದಲ್ಲಿ ಬೆಳೆ ಹಾಗೂ ಪ್ರಾಣಹಾನಿಗೆ ಮುಂದಾಗಿದ್ದ ಕಾಡಾನೆಗಳ ಕಾರ್ಯಾಚರಣೆ ಮುಂದುವರೆದಿದ್ದು, ಗುರುವಾರ ತಾಲೂಕಿನ ಬ್ಯಾದನೆ ಗ್ರಾಮದಲ್ಲಿ ಭುವನೇಶ್ವರಿ ಗುಂಪಿನ ಎರಡು ಗಂಡಾನೆಗಳಿಗೆ ರೇಡಿಯೋ ಕಾಲ‌ರ್ ಅಳವಡಿಸಲಾಯಿತು. ಡಾ.ರಮೇಶ್ ನೇತೃತ್ವದ ತಂಡ ಕಾಡಾನೆಗೆ ಅರವಳಿಕೆ ಮದ್ದು ನೀಡಿ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಈಟಿಎಫ್ ಸಿಬ್ಬಂದಿಯ ಸಹಯೋಗದಲ್ಲಿ ರೇಡಿಯೋ ಕಾಲರ್ ಅಳವಡಿಸಲಾಯಿತು. ಕಾಡಾನೆಗಳ ಪತ್ತೆ ಹಾಗೂ ಅವುಗಳ ಚಲನವಲನದ ಮಾಹಿತಿ ಪಡೆಯಲು ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಕೆಗೆ ಅರಣ್ಯ ಇಲಾಖೆ ಮುಂದಾಗಿದ್ದು ಬೇಲೂರು ತಾಲೂಕಿನ ಬ್ಯಾದನೆ ಗ್ರಾಮದಲ್ಲಿ ಭುವನೇಶ್ವರಿ ಗುಂಪಿನ ಗಂಡಾನೆಗೆ ರೇಡಿಯೋ ಕಾಲ‌ರ್ ಅಳವಡಿಕೆ ಯಶಸ್ವಿಯಾಗಿದೆ.
  • < previous
  • 1
  • ...
  • 171
  • 172
  • 173
  • 174
  • 175
  • 176
  • 177
  • 178
  • 179
  • ...
  • 552
  • next >
Top Stories
ನವೆಂಬರ್‌ಗಲ್ಲ, 2028ಕ್ಕೆ ಕ್ರಾಂತಿ: ಡಿಸಿಎಂ ಡಿಕೆಶಿ
ಕೆಜಿಎಫ್‌ ಚಾಚಾ ಖ್ಯಾತಿಯ ನಟ ಹರೀಶ್‌ ರಾಯ್‌ ಇನ್ನಿಲ್ಲ
ಕಬ್ಬು ಬೆಳೆಗಾರರ ಹೋರಾಟ ಕುರಿತು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ
ಸ್ಥಳೀಯ ಭಾಷಿಕರನ್ನೇ ಬ್ಯಾಂಕ್‌ ನೌಕರಿಗಳಿಗೆ ನೇಮಿಸಿ : ನಿರ್ಮಲಾ
ಸಕ್ಕರೆ ಕಾರ್ಖಾನೆ, ರೈತರ ಜತೆಗಿಂದು ಸಿಎಂ ಸಭೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved