ಹಾಸನಾಂಬೆ ದರ್ಶನ ಪಡೆದ ಶ್ರವಣಬೆಳಗೊಳದ ಮಹಾಸ್ವಾಮೀಜಿಹಾಸನಾಂಬೆ ದೇವಿ ದರ್ಶನ ಮಾಡಲು ಶನಿವಾರದಂದು ಬೆಳಿಗ್ಗೆ ಆಗಮಿಸಿದ್ದ ಶ್ರವಣಬೆಳಗೊಳ ಮಠದ ಮಠಾಧೀಶರಾದ ಶ್ರೀ ಚಾರು ಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಭಟ್ಟಾ ಚಾರ್ಯವರ್ಯ ಮಹಾ ಸ್ವಾಮೀಜಿ ಅವರು ದರ್ಶನ ಪಡೆದರು. ಮಹಾಸ್ವಾಮೀಜಿ ಹಾಸನಾಂಬೆ ದೇವಾಲಯಕ್ಕೆ ಆಗಮಿಸುತ್ತಿದ್ದಂತೆ ಜಿಲ್ಲಾಡಳಿತದಿಂದ ಮಂಗಳ ವಾದ್ಯಗಳೊಂದಿಗೆ ಭವ್ಯ ಸ್ವಾಗತ ಕೋರಿ ಬರಮಾಡಿಕೊಂಡರು. ಮೊದಲು ಹಾಸನಾಂಬೆ ದೇವಿ ದರ್ಶನ ಪಡೆದು, ದರ್ಬಾರ್ ಗಣಪತಿ, ಶ್ರೀ ಸಿದ್ದೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.