ಚಿಕ್ಕಬೊಮ್ಮನಹಳ್ಳಿಯಲ್ಲಿ ಶ್ರೀರಂಗನಾಥಸ್ವಾಮಿ ರಥೋತ್ಸವದೇವಾಲಯದಲ್ಲಿ ಪೂಜೆಯನ್ನು ಪೂರ್ಣಗೊಳಿಸಿದ ನಂತರ ವಿವಿಧ ಬಗೆಯ ಪುಷ್ಪಗಳಿಂದ ಸರ್ವಾಲಂಕೃತಗೊಂಡ ಸ್ವಾಮಿಯ ಉತ್ಸವ ಮೂತಿಯನ್ನು ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಶ್ರೀ ಶಂಭುನಾಥ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ ಕದಲಿ ಕಡಿಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಸ್ವಾಮಿಯ ಹರ್ಷೋಧ್ಘಾರ ಮಾಡುತ್ತಾ ವಿವಿಧೆಡೆಗಳಿಂದ ಆಗಮಿಸಿದ ಭಕ್ತರು ರಥ ಎಳೆದು, ರಥವನ್ನು ದೇವಾಲಯದ ಬಳಿಯಿಂದ ಚಾಮುಂಡೇಶ್ವರಿ ದೇವಾಲಯದವರೆಗೆ ಎಳೆದು ನಂತರ ದೇಗುಲದ ಬಳಿಗೆ ತಂದು ನಿಲ್ಲಿಸಲಾಯಿತು. ರಥದ ಮುಂದೆ ಸಾಗಿದ ಪೂಜಾ ಕುಣಿತ, ವೀರಗಾಸೆ ಕುಣಿತಗಳು ಮನಸೆಳೆದವು.