ಬೇಲೂರು ಪಟ್ಟಣದ ಬೀದಿಬೀದಿಗಳಲ್ಲಿ ನಾಯಿಗಳು ಗುಂಪು ಕಟ್ಟಿಕೊಂಡು ರಾಜಾರೋಷವಾಗಿ ಓಡಾಡುತ್ತಿವೆ. ದಿನದಿಂದ ದಿನಕ್ಕೆ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವುದು ನಾಗರಿಕರಲ್ಲಿ ಆತಂಕ ಉಂಟುಮಾಡಿದೆ. ಕೆಲವು ನಾಯಿಗಳು ಬೈಕ್ ಸವಾರರನ್ನು ಬೆನ್ನಟ್ಟಿ ಕೆಳಗೆ ಬೀಳಿಸುತ್ತಿವೆ. ಇತ್ತೀಚೆಗೆ ಜಾತಿಗಣತಿ ಸಂದರ್ಭದಲ್ಲಿ ಶಿಕ್ಷಕಿಯ ಮೇಲೆ ಮಾರಣಾಂತಿಕ ದಾಳಿ ಮಾಡಿರುವ ಘಟನೆ ನಡೆದಿದೆ. ಬೆಳಗ್ಗೆ ಶಾಲೆಗೆ ಹೋಗುವ ಮಕ್ಕಳು, ವಾಕಿಂಗ್ಗೆ ಹೋದವರು, ಪಾದಚಾರಿಗಳು, ಮಹಿಳೆಯರು, ವೃದ್ಧರು ಜೀವಭಯದಲ್ಲಿ ನಡೆದಾಡುತ್ತಿದ್ದಾರೆ.