• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸೀತರಾಮಾಂಜನೇಯ ದೇವಸ್ಥಾನದಲ್ಲಿ ರಾಮನವಮಿ ಪೂಜೆ
ಶ್ರೀರಾಮನವಮಿ ಅಂಗವಾಗಿ ನಗರದ ಶ್ರೀ ಸೀತರಾಮಾಂಜನೇಯ ದೇವಸ್ಥಾನದಲ್ಲಿ ಭಾನುವಾರ ಬೆಳಗಿನಿಂದ ವಿವಿಧ ಪೂಜೆ ಹಾಗೂ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಬೆಳಗಿನಿಂದಲೇ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪುನೀತರಾದರು. ಸೀತರಾಮಾಂಜನೇಯ ಸೇವಾ ಸಮಿತಿ ಉಪಾಧ್ಯಕ್ಷ ಎಂ.ಎನ್. ಪಾಂಡುರಂಗ ಮಾಧ್ಯಮದೊಂದಿಗೆ ಮಾತನಾಡಿ, ಈ ದೇವಸ್ಥಾನದಲ್ಲಿ ಕಳೆದ ೪೫ ವರ್ಷಗಳಿಂದಲೂ ವಿಶೇಷವಾದಂತಹ ರಾಮೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದೆ ಎಂದರು.
ನುಗ್ಗೇಹಳ್ಳಿ ಗ್ರಾಪಂ ವತಿಯಿಂದ ಬಾಬೂಜೀ ಜಯಂತಿ
ಮಾಜಿ ಉಪ ಪ್ರಧಾನಿಗಳಾದ ಡಾ.ಬಾಬು ಜಗಜೀವನ್ ರಾಮ್ ರವರು ಈ ದೇಶ ಕಂಡ ಅತ್ಯುತ್ತಮ ನಾಯಕರಾಗಿದ್ದು, ಅವರ ತತ್ವ, ಸಿದ್ಧಾಂತಗಳನ್ನು ಎಲ್ಲರೂ ಗೌರವಿಸಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವರಾಮ್ ಹೇಳಿದರು. ಹೋಬಳಿ ಕೇಂದ್ರದ ಗ್ರಾಮ ಪಂಚಾಯತಿ ವತಿಯಿಂದ ಮಾಜಿ ಉಪಪ್ರಧಾನಿ, ರಾಷ್ಟ್ರನಾಯಕ ಡಾ. ಬಾಬು ಜಗಜೀವನ್ ರಾಮ್ ಅವರ 118ನೇ ಜನ್ಮ ದಿನವನ್ನು ಆಚರಿಸಲಾಯಿತು. ಬಾಬೂಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಪೂಜೆ ಸಲ್ಲಿಸಲಾಯಿತು.
ಪ್ರಸ್ತುತ ಸಮಾಜಕ್ಕೆ ಜಗಜೀವನ್‌ರಾಂ ಆದರ್ಶಗಳ ಅಗತ್ಯವಿದೆ
ಸಾಮಾಜಿಕ ಬದಲಾವಣೆಯ ಹರಿಕಾರರಾಗಿದ್ದ ಬಾಬು ಜಗಜೀವನ ರಾಮ್ ಅವರ ಆದರ್ಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ ಎಂದು ತಹಸೀಲ್ದಾರ್‌ ಸೌಮ್ಯ ಅವರು ತಿಳಿಸಿದರು. ಅಂದು ಉಂಟಾಗಿದ್ದ ಬರಗಾಲದ ಸಮಯದಲ್ಲಿ ತೀವ್ರ ಆಹಾರ ಬಿಕ್ಕಟ್ಟನ್ನು ಪರಿಹರಿಸುವ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ಜಗಜೀವನ್ ರಾಮ್ ಅವರು ನಿರ್ವಹಿಸಿದ್ದಾರೆ. ಇದರ ಫಲವಾಗಿ ಇಂದು ಆಹಾರದ ಸಮಸ್ಯೆ ಉಲ್ಬಣಗೊಳ್ಳದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಅರಸೀಕೆರೆ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮನವಮಿ
ರಾಮನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗ್ಗೆಯಿಂದಲೇ ನವಗ್ರಹ ಪೂಜೆ ಸೂರ್ಯ ನಮಸ್ಕಾರ ರಾಮಾಯಣ ಪಾರಾಯಣ ಪಠಣ ಶ್ರೀ ಸೀತಾರಾಮರಿಗೆ ಪಂಚಾಮೃತ ಅಭಿಷೇಕ ಅಷ್ಟಾವಧಾನ ಮಹಾಮಂಗಳಾರತಿ ನೆರವೇರಿತು. ತಾಲೂಕು ಬ್ರಾಹ್ಮಣ ಸಂಘ ವಿಪ್ರ ನೌಕರರ ಸಂಘ ಸೀತಾ ಮಹಿಳಾ ಸಂಘ ಯುವಕ ಸಂಘ ಮತ್ತು ಯಾಜ್ಞವಲ್ಕ ಸಂಘ ಹಾಗೂ ಪಾಕ ತಜ್ಞರ ಸಂಘದ ಪದಾಧಿಕಾರಿಗಳು ಸದಸ್ಯರುಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮ ಹಣ ವಸೂಲಿ
ಗ್ರಾಹಕರಿಂದ ಪ್ರತಿ ತಿಂಗಳು ಪಡಿತರ ಪಡೆಯಲು 20 ರು. ಮತ್ತು ಕೆವೈಸಿ ನೀಡಲು 30 ರು.ಗಳ ಹಣ ಪಡೆಯುತ್ತಿದ್ದಾರೆ ಎಂಬ ಸಾರ್ವಜನಿಕರ ಆರೋಪದ ಮೇರೆಗೆ ಮಾನವ ಹಕ್ಕು ಹೋರಾಟ ಒಕ್ಕೂಟದ ಪದಾಧಿಕಾರಿಗಳು ಆಹಾರ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಆಹಾರ ಇಲಾಖೆ ಅಧಿಕಾರಿಗಳಾದ ವೀಣಾ ಮತ್ತು ಗೀತಾಂಜಲಿ ಪರಿಶೀಲನೆ ನಡೆಸಿ, ಪಡಿತರ ನೀಡಲು ಯಾವುದೇ ಹಣ ಕೊಡುವಂತಿಲ್ಲ. ಅಕ್ರಮವಾಗಿ ಸಾರ್ವಜನಿಕರಿಂದ ಹಣ ವಸಲಿ ಮಾಡಿರುವುದು ತಪ್ಪು. ಹಾಗಾಗಿ ಅಕ್ರಮವಾಗಿ ಹಣ ಪಡೆದಿರುವ ಸೊಸೈಟಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಬಿಜೆಪಿ ಕಚೇರಿಯಲ್ಲಿ ಪಕ್ಷದ ಸಂಸ್ಥಾಪನಾ ದಿನಾಚರಣೆ
ಬಿಜೆಪಿ ಬೆಳೆದು ಬಂದ ದಾರಿ ಅದರ ಸಿದ್ಧಾಂತಗಳು ಮತ್ತು ಅದರ ಮೌಲ್ಯಗಳನ್ನು ಮತ್ತೆ ಜ್ಞಾಪನ ಮಾಡುವುದೇ ಸ್ಥಾಪನ ದಿನದ ಉದ್ದೇಶವಾಗಿದೆ. ಬಿಜೆಪಿ ಸಿದ್ಧಾಂತ ಒಪ್ಪಿಕೊಂಡು ಅನೇಕರು ಬಂದಿದ್ದಾರೆ. ಒಂದು ಸಂಘಟನೆ ಮತ್ತು ಸಂಘ ಕಟ್ಟಬೇಕಾದರೇ ಒಂದು ಉದ್ದೇಶ ಗುರಿ ಇಲ್ಲದಿದ್ದರೇ ಯಾವುದೇ ಸಂಘಟನೆ ಕಟ್ಟಲು ಆಗುವುದಿಲ್ಲ. ನಮ್ಮೂರಿಗೆ ಕೆರೆ, ಆಸ್ಪತ್ರೆಗಾಗಿ ಹೋರಾಟ ಮಾಡಬೇಕು ಎಂಬಂತಹ ಗುರಿಗಳು ನಮ್ಮಲ್ಲಿ ಇರಬೇಕು ಎಂದು ಬಿಜೆಪಿ ಹಿರಿಯ ಮುಖಂಡ ನವಿಲೆ ಅಣ್ಣಪ್ಪ ತಿಳಿಸಿದರು.
ಸ್ಕೌಟ್ಸ್ ಗೈಡ್ಸ್‌ನಿಂದ ಸಹಕಾರ ಮನೋಭಾವ ಬೆಳೆಯುತ್ತದೆ
ಸ್ಕೌಟ್ಸ್ ಮತ್ತು ಗೈಡ್ಸ್‌ನ ಪ್ರಾಮುಖ್ಯತೆ ಎಂದರೆ ನಿನ್ನ ಶಕ್ತಿ ಇದ್ದಷ್ಟು ಕರ್ತವ್ಯ ನಿರ್ವಹಿಸು ಇದು ನಮ್ಮ ಗುರಿ, ಸದಾ ಸಿದ್ಧನಾಗಿರು ಇದು ನಮ್ಮ ಧ್ಯೇಯ, ಸೇವೆಯೇ ನಮ್ಮ ಚರಮ ವಾಕ್ಯವಾಗಿದೆ. ಇಲ್ಲಿನ ಶಿಕ್ಷಣ ವಿಧಾನವು ಸ್ವಯಂ ಶಿಕ್ಷಣದ ಮೂಲಕ ಹಂತಹಂತವಾಗಿ ಮುಂದುವರಿಯುತ್ತದೆ. ಪ್ರತಿಜ್ಞೆ, ವಚನ ಸ್ವೀಕಾರ ಮತ್ತು ನಿಯಮಗಳನ್ನು ಅನುಸರಿಸುವುದರ ಮೂಲಕ ಸನ್ನಡತೆಯ ಮುನ್ನಡೆ, ಉತ್ತಮ ಸಾಮರ್ಥ್ಯ, ಸ್ವಾವಲಂಬನೆ, ಭರವಸೆಯುಳ್ಳ ವ್ಯಕ್ತಿತ್ವ, ಸಹಕಾರ ಮನೋಭಾವ,ಗುಣ ಕಲಿಯುತ್ತಾರೆ.
ಡಾ. ಬಾಬು ಜಗಜೀವನ್ ರಾಮ್ ಸಾಧನೆ, ಚಿಂತನೆಗಳು ಭವಿಷ್ಯಕ್ಕೆ ದಾರಿದೀಪ: ಸಂಸದ ಶ್ರೇಯಸ್ ಪಟೇಲ್
ರಾಷ್ಟ್ರ ಪ್ರಗತಿ ಪಥದಲ್ಲಿ ಸಾಗುವುದಕ್ಕೆ ಡಾ. ಬಾಬು ಜಗಜೀವನ್ ರಾಮ್ ಅವರು ಬಹುಪಾಲು ಕಾರಣರಾಗಿದ್ದಾರೆ. ಅವರು ಕಾರ್ಮಿಕ ಸಚಿವರಾಗಿ ಜಾರಿಗೆ ತಂದಂತಹ ಕಾರ್ಮಿಕ ನೀತಿಗಳು, ರೈಲ್ವೆ ನಿಯಮಗಳು, ರಕ್ಷಣಾ ಸಚಿವರಾಗಿದ್ದಾಗ ಜಾರಿಗೆ ತಂದಂತಹ ನಿಯಮಗಳು, ಕೃಷಿ ಕ್ರಾಂತಿ, ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಇವರ ಸಾಧನೆಯು ಅಪಾರವಾಗಿದೆ.
ಜಗಜೀವನ್‌ರಾಮ್ ಹೆಸರಿನಲ್ಲೂ ವಸತಿ ಶಾಲೆಗಳನ್ನು ತೆರೆಯಲಿ: ರೇವಣ್ಣ
ಡಾ. ಬಾಬು ಜಗಜೀವನ್‌ರಾಮ್ ವೃತ್ತದಲ್ಲಿ ಬೆಳಗ್ಗೆ ೧೦ ಗಂಟೆಗೆ ನಿಗದಿಯಾಗಿದ್ದ ಗಣ್ಯರ ಮೆರವಣಿಗೆ ಕಾರ್ಯಕ್ರಮ ೧೦.೩೦ ಆದರೂ ಪ್ರಾರಂಭವಾಗದೇ ಇದ್ದಾಗ ಸರ್ಕಾರಿ ಅಧಿಕಾರಿಗಳು ಬಂದಿಲ್ಲ, ಎಸ್ಸಿ, ಎಸ್ಟಿ ಕಾರ್ಯಕ್ರಮಗಳಿಗೆ ತಾರತಮ್ಯ ಮಾಡುತ್ತಿದ್ದೀರಿ ಎಂದು ಮಾದಿಗ ದಂಡೋರ ಸಮಿತಿಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ತಹಸೀಲ್ದಾರ್ ಅವರಿಗೆ ಸಮಯಪ್ರಜ್ಞೆ ಕುರಿತು ಅರಿವು ಮೂಡಿಸಿದರು.
ವ್ಯಕ್ತಿಗಳ ನಡುವಿನ ವಾಗ್ವಾದ ಓರ್ವನ ಕೊಲೆಯಲ್ಲಿ ಅಂತ್ಯ
ಕೊಲೆಯಾದ ಲಕ್ಕಪ್ಪ ಮತ್ತು ಸಂಗಡಿಗರು ದೊಡ್ಡನುಕಟ್ಟೆ ಗ್ರಾಮದ ತಮ್ಮ ಮನೆಯ ಮುಂದೆ ಚೌಕಾಬಾರ ಆಡುತ್ತಿದ್ದ ಸಮಯದಲ್ಲಿ ಇದೇ ಗ್ರಾಮದ ಬಸವರಾಜು ಎಂಬಾತನು ನೀವು ಜೂಜಾಟ ಆಡುತ್ತಿದ್ದೀರಿ, ನಿಮ್ಮ ಮೇಲೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೇಳಿದಾಗ ನಡೆದ ವಾಗ್ವಾದದಲ್ಲಿ ಬಸವರಾಜ ಮತ್ತು ನಂಜುಂಡ ಎಂಬುವವರು ಲಕ್ಕಪ್ಪ ಮತ್ತು ಸಂಗಡಿಗರಿಗೆ ಚಾಕುವಿನಿಂದ ಇರಿದಿದ್ದಾರೆ.
  • < previous
  • 1
  • ...
  • 164
  • 165
  • 166
  • 167
  • 168
  • 169
  • 170
  • 171
  • 172
  • ...
  • 552
  • next >
Top Stories
ಕಬ್ಬು ಬೆಳೆಗಾರರ ಹೋರಾಟ ಕುರಿತು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ
ಸ್ಥಳೀಯ ಭಾಷಿಕರನ್ನೇ ಬ್ಯಾಂಕ್‌ ನೌಕರಿಗಳಿಗೆ ನೇಮಿಸಿ : ನಿರ್ಮಲಾ
ಸಕ್ಕರೆ ಕಾರ್ಖಾನೆ, ರೈತರ ಜತೆಗಿಂದು ಸಿಎಂ ಸಭೆ
ಅಮೆರಿಕಕ್ಕೂ ತಲುಪಿತು ಭಾರತದ ಗ್ಯಾರಂಟಿ ಭರಾಟೆ !
ವಂದೇ ಮಾತರಂ - 150ನೇ ವಾರ್ಷಿಕೋತ್ಸವ : ಸಾಂಸ್ಕೃತಿಕ ರಾಷ್ಟ್ರೀಯತೆಯ ಘೋಷಣೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved