ಸೈನ್ಯಕ್ಕೆ ಸೇರಲು ಶಾಲೆಗಳಲ್ಲಿ ದೇಶಭಕ್ತಿ ಪಾಠ ಕಲಿಸಬೇಕುದೇಶ ಸೇವೆಯೇ ಈಶ ಸೇವೆ ಬೇರೆ ದೇಶಗಳಲ್ಲಿ ಒಬ್ಬ ಮಗನನ್ನು ದೇಶಕ್ಕಾಗಿ ಮೀಸಲಿಡುತ್ತಾರೆ. ಆದರೆ ನಮ್ಮ ದೇಶದಲ್ಲಿ ಸೈನ್ಯಕ್ಕೆ ಸೇರಿಸಲು ಆಸಕ್ತಿಯೇ ಇಲ್ಲ. ಸೈನ್ಯಕ್ಕೆ ಸೇರಲು ಶಾಲೆಗಳಲ್ಲಿ ದೇಶಭಕ್ತಿ ಪಾಠ ಕಲಿಸಬೇಕು. ಮನೆಗಳಲ್ಲಿ ಪೋಷಕರು ಸೈನಿಕರ ಬಗ್ಗೆ ದೇಶದ ಬಗ್ಗೆ ರಾಷ್ಟ್ರದ ಬಗ್ಗೆ ಮಾತನಾಡಬೇಕು. ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನ, ರಾಷ್ಟ್ರಭಕ್ತಿ ತುಂಬಿಸಬೇಕು. ದೇಶಕ್ಕೆ ಮುಂದೆ ಏನಾದರೂ ಗಂಡಾಂತರ ಒದಗಿದ್ದರೆ ಅದನ್ನು ಎದುರಿಸುವ ಧೈರ್ಯ ಮಕ್ಕಳಿಗೆ ತುಂಬಬೇಕು ಎಂದು ಯೋಧ ಗಣೇಶ್ ಗೌಡ ಅಭಿಪ್ರಾಯ ಪಟ್ಟರು.