ಮನೆಗಳಿಗೆ ನುಗ್ಗಿದ ಮಳೆನೀರುಅರಸೀಕೆರೆ ನಗರದಲ್ಲಿ ಸುರಿದ ಮಳೆಗೆ ಐದು ಮನೆಗಳಿಗೆಸಂಪೂರ್ಣ ಹಾನಿಯಾಗಿ ಹತ್ತಾರು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಎರಡನೇ ವಾರ್ಡಿನಲ್ಲಿ ಐದು ಮನೆಗಳು ಕುಸಿದಿದ್ದು ಘಟನಾಸ್ಥಳಕ್ಕೆ ನಗರಸಭೆ ಅಧ್ಯಕ್ಷ ಎಂ ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ ಮೇಸ್ತ್ರಿ, ಆರ್ ಐ ಶಿವಾನಂದ್ ನಾಯ್ಕ ನಗರಸಭೆಯ ಎಇಇ ಸುನಿಲ್, ವಾರ್ಡಿನ ಸದಸ್ಯರಾದ ಕಲೈಅರಸೀ ಸುಧಾಕರ್ ಸೇರಿದಂತೆ ನಗರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.