ಅರಕಲಗೂಡು ದಸರಾಗೆ ಶಾಸಕ ಮಂಜು ಚಾಲನೆಗ್ರಾಮದೇವತೆ ದೊಡ್ಡಮ್ಮ ದೇವಾಲಯದ ಆವರಣದಲ್ಲಿ ಗುರುವಾರ ಸಂಜೆ ಅರಕಲಗೂಡು ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣದಲ್ಲಿ ಬಹಳ ಹಿಂದಿನಿಂದಲೂ ದಸರಾ ಉತ್ಸವ ನಡೆದು ಬಂದಿತ್ತು. ಕಾರಣಾಂತರಿಂದ ಕೆಲಕಾಲ ಸ್ಥಗಿತಗೊಂಡಿದ್ದ ಇದಕ್ಕೆ, 24 ವರ್ಷಗಳ ಹಿಂದೆ ಮರುಚಾಲನೆ ನೀಡಿ ವೈಭವದಿಂದ ನಡೆಸಿಕೊಂಡು ಬರುತ್ತಿದ್ದು ರಾಜ್ಯದಾದ್ಯಂತ ಗಮನ ಸೆಳೆದಿದೆ ಎಂದರು. ಪಟ್ಟಣದಲ್ಲಿ ವೈಭವದಿಂದ ನಡೆಯುತ್ತಿರುವ ದಸರಾ ಉತ್ಸವ ತಾಲೂಕಿನ ಸಾಂಸ್ಕೃತಿಕ ಹೆಮ್ಮೆಯಾಗಿದೆ ಎಂದು ಶಾಸಕ ಎ. ಮಂಜು ತಿಳಿಸಿದರು.