ಕ್ರೀಡಾ ಮನೋಭಾವ ಇರುವವರು ಸಾಧಕರಾಗಬಲ್ಲರುಕ್ರೀಡಾ ಮನೋಭಾವ ಇರುವವರು ಸಾಧಕರಾಗಬಲ್ಲರು, ದೇಶಕ್ಕೆ ಸತ್ಪ್ರಜೆಯಾಗಬಲ್ಲರು, ಜೀವನದಲ್ಲಿ ಯಶಸ್ಸು ಗಳಿಸುವರು. ಏಕೆಂದರೆ ಸೋಲು ಗೆಲುವು ಒಂದು ನಾಣ್ಯದ ಎರಡು ಮುಖವಿದ್ದಂತೆ, ಕ್ರೀಡಾಪಟುಗಳು ಮಾತ್ರ ಅದನ್ನು ಸಮನಾಗಿ ಸ್ವೀಕರಿಸುವರು. ಧರ್ಮ, ಜಾತಿ ಭೇದ ಇಲ್ಲದೆ ಇರುವುದು ಕ್ರೀಡೆಯಲ್ಲಿ ಮಾತ್ರ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು. ತಂದೆತಾಯಿ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಕಷ್ಟಪಡುತ್ತಾರೆ, ಅವರ ತ್ಯಾಗಗಳಿಗೆ ಮಕ್ಕಳು ಸಾರ್ಥಕತೆಯನ್ನು ನೀಡಬೇಕು, ಆ ದೃಷ್ಟಿಯಲ್ಲಿ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ತಮ್ಮ ವ್ಯಕ್ತಿತ್ವವನ್ನು ದೃಢಶಕ್ತಿ ಮತ್ತು ದೃಢಸಂಕಲ್ಪದಿಂದ ರೂಪಿಸಿಕೊಳ್ಳಬೇಕು ಎಂದರು.