• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಶ್ರೀ ಕಾಲಭೈರವೇಶ್ವರ ಸ್ವಾಮಿ ನೂತನ ರಥ ಲೋಕಾರ್ಪಣೆ
ಅರಸೀಕೆರೆ ಬಾಣಾವರದ ಸಮೀಪದ ಮನಕತ್ತೂರು ಗ್ರಾಮದಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿಯವರ ನೂತನ ರಥವನ್ನು ಲೋಕಾರ್ಪಣೆ ಮಾಡಿ ನಂತರ ರಥದಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿಯನ್ನು ಕೂರಿಸಿ ವಿಜೃಂಭಣೆಯಿಂದ ರಥೋತ್ಸವವನ್ನು ನೆರವೇರಿಸಲಾಯಿತು. ರಥೋತ್ಸವದ ಅಂಗವಾಗಿ ಶ್ರೀ ಕಾಲಭೈರವೇಶ್ವರ ಸ್ವಾಮಿ ಅವರ ಸನ್ನಿಧಿಯಲ್ಲಿ ಶಿವರಾತ್ರಿ ಹಬ್ಬದ ದಿನದಿಂದ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಿ ಶುಕ್ರವಾರ ಬೆಳಗ್ಗೆ ಶ್ರೀ ವೀರಭದ್ರೇಶ್ವರ ಸ್ವಾಮಿ ಅವರ ಕೆಂಡೋತ್ಸವವನ್ನು ನಡೆಸಿ ನಂತರ ರಥಕ್ಕೆ ಪೂಜೆಯನ್ನು ಸಲ್ಲಿಸಿ ರಥೋತ್ಸವ ನಡೆಸಲಾಯಿತು.
ಟೆಂಡರ್‌ ವಿಚಾರದಲ್ಲಿ ಶಾಸಕ ರೇವಣ್ಣ ತಾಪಂ ಇಒ ವಾಗ್ವಾದ
ಹೊಳೆನರಸೀಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ತಾ.ಪಂ. ತಾಲೂಕು ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ತಾಲೂಕಿನ ಗ್ರಾಮ ಪಂಚಾಯಿತಿ ಪಿಡಿಒಗಳ ಉಪಸ್ಥಿತಿಯಲ್ಲಿ ನಡೆಸಿದ ಸಭೆಯಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದರು. ತಾಲೂಕು ಪಂಚಾಯಿತಿಯಲ್ಲಿ ಕಂಪ್ಯೂಟರ್ ನಿರ್ವಹಣೆಗಾಗಿ ನಲವತ್ತು ಲಕ್ಷ ರು. ಗಳ ಟೆಂಡರ್ ಕರೆಯಾಗಿದೆ. ಆದರೆ ಟೆಂಡರ್ ಪ್ರಕ್ರಿಯೆ ಮಾಡಿರುವ ಅಧಿಕಾರಿಗಳು ನಲವತ್ತು ಲಕ್ಷದ ಟೆಂಡರ್‌ಗೆ ನಾಲ್ಕು ಕೋಟಿ ವ್ಯವಹಾರದ ವಹಿವಾಟು ತೋರಿಸಬೇಕೆಂದು ಟೆಂಡರ್‌ದಾರರಿಗೆ ತಾಕೀತು ಮಾಡಿ ಅವರ ಟೆಂಡರ್‌ ಅನ್ನು ಮೂಲೆಗುಂಪು ಮಾಡಿದ್ದಾರೆ ಎಂದು ತಾಪಂ ಅಧಿಕಾರಿಯನ್ನು ತೀವ್ರವಾಗಿ ತರಾಟೆ ತಗೆದುಕೊಂಡರು.
ಪ್ರಮುಖ ಬೇಡಿಕೆಗಳಿಗೆ ರಾಜ್ಯ ಬಜೆಟ್‌ ಸ್ಪಂದನೆ
ಹಾಸನ ಜಿಲ್ಲೆಯ ಪ್ರಮುಖ ಬೇಡಿಕೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಮನ್ನಣೆ ಸಿಕ್ಕಿದೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಪ್ರಮುಖವಾಗಿ ಬೇಲೂರು ಸೇರಿದಂತೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಿತಿ ಮೀರಿರುವ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯವ ಸಂಬಂಧ, ಭದ್ರಾ ಅಭಯಾರಣ್ಯದಲ್ಲಿ ಆನೆಧಾಮ ನಿರ್ಮಾಣಕ್ಕೆ ಆರಂಭಿಕವಾಗಿ ಸಿಎಂ ಸಿದ್ದರಾಮಯ್ಯ ಅವರು ೨೦ ಕೋಟಿ ರು. ಅನುದಾನ ನೀಡಿದ್ದಾರೆ.
ತ್ಯಾಜ್ಯ ವಿಲೇವಾರಿಗೆ ವಾಹನಗಳನ್ನು ಖರೀದಿಸಿದ ಬೇಲೂರು ಪುರಸಭೆ
ತ್ಯಾಜ್ಯ ವಿಲೇವಾರಿಗೆ ಎರಡು ಟ್ರ್ಯಾಕ್ಟರ್, ಒಂದು ಆಟೋ ಟಿಪ್ಪರ್ ಅನ್ನು 15ನೇ ಹಣಕಾಸು ಯೋಜನೆಯಡಿಯಲ್ಲಿ ಖರೀದಿಸಿದ್ದು, ಸುಮಾರು 40 ಲಕ್ಷ ರುಪಾಯಿ ವೆಚ್ಚವಾಗಿದ್ದು, ಪಟ್ಟಣ ಬೆಳೆದಂತೆ ಜನಸಂಖ್ಯೆಯು ಹೆಚ್ಚಾಗುತ್ತಿದೆ. ಜನಸಂಖ್ಯೆ ಜಾಸ್ತಿಯಾದರೆ ಮನೆಯಲ್ಲಿ ಕಸವು ಜಾಸ್ತಿಯಾಗುತ್ತದೆ. ನಮ್ಮ ಕಚೇರಿಯಲ್ಲಿ ಎರಡು ಟ್ರ್ಯಾಕರ್, ಒಂದು ಆಟೋ ಟಿಪ್ಪರ್ ಇದ್ದು, ಕಸ ಸಂಗ್ರಹಣೆ ಮಾಡಲು ಕಷ್ಟವಾಗುತ್ತಿತ್ತು, ಇದನ್ನು ಮನಗಂಡು ವಾಹನ ಖರೀದಿಸಲಾಗಿದೆ. ಪುರಸಭೆ ನಾಗರಿಕರು ನಿಮ್ಮ ಮನೆ ಬಾಗಿಲಿಗೆ ಬರುವ ವಾಹನಕ್ಕೆ ಕಸವನ್ನು ಹಾಕಿ ನಗರವನ್ನು ಸ್ವಚ್ಛವಾಗಿಡಬೇಕು ಎಂದು ಅಧ್ಯಕ್ಷ ಅಶೋಕ್‌ ಹೇಳಿದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಕೆಡಿಪಿ ಸದಸ್ಯೆ
ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಪ್ರಥಮ ಘಟ್ಟವಾಗಿದ್ದು ದಿಟ್ಟತನದಿಂದ ಎದುರಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಜಿಲ್ಲಾ ಕೆಡಿಪಿ ಸದಸ್ಯೆ ಬಿ.ಎಂ ಸೌಮ್ಯ ಆನಂದ್ ಹೇಳಿದರು. ಗಮನವಿಟ್ಟು ಓದಿದರೆ ಮಾತ್ರ ಯಶಸ್ಸು ನಿಮ್ಮದಾಗುತ್ತದೆ. ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಅತ್ಯಂತ ಶ್ರದ್ಧೆಯಿಂದ ಓದಬೇಕು ಹಾಗೂ ಕಠಿಣ ಶ್ರಮ ಪಡಬೇಕು. ನೀವುಗಳು ಉತ್ತಮ ಫಲಿತಾಂಶದ ಜೊತೆಗೆ ಶಾಲೆಗೆ ಹಾಗೂ ನಿಮ್ಮ ಪೋಷಕರಿಗೆ‌ ಕೀರ್ತಿ ತರಲು ಸಾಧ್ಯ ಎಂದರು.
ಕಾಡಾನೆ ಸಮಸ್ಯೆ ಬಗೆಹರಿಸುವ ಬದಲು ಸತ್ತರೆ ಪರಿಹಾರ ಹೆಚ್ಚಿಸಿದ ಬಜೆಟ್‌
ಜಿಲ್ಲೆಯಲ್ಲಿರುವ ಬಹುದೊಡ್ಡ ಸಮಸ್ಯೆ ಎಂದರೆ ಅದುವೇ ಕಾಡಾನೆ ಹಾವಳಿ. ಆಲೂರು, ಬೇಲೂರು ತಾಲೂಕಿನಲ್ಲಿ ಪ್ರತಿನಿತ್ಯ ಆನೆಗಳು ಸದ್ದು ಮಾಡುತ್ತಲೇ ಇವೆ. ಅರೇಹಳ್ಳಿ, ಬಿಕ್ಕೋಡು ಭಾಗದಲ್ಲಿ ಮನೆಯಿಂದ ಹೊರ ಹೋದವರು ಮತ್ತೆ ಬರುತ್ತಾರೆ ಎನ್ನುವ ಗ್ಯಾರಂಟಿ ಇಲ್ಲ ಎನ್ನುವ ಸ್ಥಿತಿ ಇದೆ. ಈವರೆಗೆ ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ. ಹಾಗಾಗಿ ಇಲ್ಲಿನ ಜನರು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಎನ್ನುವ ಪ್ರಮುಖ ಬೇಡಿಕೆ ಇಟ್ಟಿದ್ದರು. ಆದರೆ ಸರ್ಕಾರ ಸಮಸ್ಯೆ ಬಗೆಹರಿಸುವ ಬದಲಾಗಿ ಸಮಸ್ಯೆಯಿಂದ ಪ್ರಾಣ ಕಳೆದುಕೊಂಡವರಿಗೆ ನೀಡುವ ಪರಿಹಾರದ ಮೊತ್ತವನ್ನು 15 ಲಕ್ಷ ರು.ಗಳಿಂದ 20 ಲಕ್ಷ ರು.ಗಳಿಗೆ ಏರಿಸಿದೆ.
ಬಸ್ ನಿಲ್ದಾಣದ ವ್ಯವಸ್ಥೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ
ಸರ್ಕಾರದ ಗ್ಯಾರಂಟಿ ಯೋಜನೆಗಳ ಮೈಸೂರು ವಿಭಾಗದ ಉಪಾಧ್ಯಕ್ಷೆ ಪುಷ್ಪ ಅಮರ್‌ನಾಥ್ ಅವರು ಹಾಸನದ ಕೆ.ಎಸ್.ಆರ್‌.ಟಿ. ಬಸ್ ನಿಲ್ದಾಣಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಅವರು ಶಕ್ತಿ ಯೋಜನೆ ಕುರಿತು ಮಹಿಳೆಯರನ್ನು ಮಾತನಾಡಿಸಿ, ಬಸ್ ನಿಲ್ದಾಣದ ಹೋಟೆಲ್ ಹಾಗೂ ಫಾಸ್ಟ್ ಫುಡ್ ಮಳಿಗೆಗಳನ್ನು ವೀಕ್ಷಣೆ ಮಾಡಿದರು. ಆಹಾರ ಸೇವನೆಗೆ ಬಳಸುತ್ತಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಹೋಟೆಲ್‌ಗಳಲ್ಲಿ ಆರೋಗ್ಯಪೂರ್ಣವಾದ ಉತ್ತಮ ಗುಣಮಟ್ಟದ ತಿಂಡಿ ಮತ್ತು ಊಟ ಒದಗಿಸಬೇಕು ಎಂದು ಸೂಚಿಸಿದರು.
ಹೊಳೆನರಸೀಪುರ ಪುರಸಭೆ ಅಧ್ಯಕ್ಷರಾಗಿ ಪ್ರಸನ್ನ ಅವಿರೋಧ ಆಯ್ಕೆ
ಹೊಳೆನರಸೀಪುರ ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷರಾಗಿ ಎಚ್.ಕೆ.ಪ್ರಸನ್ನ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ದೇವೇಗೌಡರ ಆಶೀರ್ವಾದ ಹಾಗೂ ಶಾಸಕ ರೇವಣ್ಣನವರ ಕೃಪೆಯಿಂದ ಅಧ್ಯಕ್ಷನಾಗಿದ್ದೇನೆ ಹಾಗೂ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ಪಟ್ಟಣದ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಬೀದಿ ದೀಪದ ವ್ಯವಸ್ಥೆ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಸಮಸ್ಯೆಗಳಿದ್ದರೆ ಪರಿಹರಿಸುತ್ತೇನೆ ಎಂದು ಪ್ರಸನ್ನ ತಿಳಿಸಿದರು.
ಬಜೆಟ್‌ನ ಕಡತದಲ್ಲಿ ಘೋಷಣೆಯಾಗೇ ಉಳಿದ ಘೋಷಣೆಗಳು
ಪ್ರತಿ ವರ್ಷ ಬಜೆಟ್‌ ಮಂಡನೆಯಾಗುತ್ತಲೇ ಇದೆ. ಅದರಲ್ಲಿ ಜಿಲ್ಲೆಗೆ ಘೋಷಣೆಯಾಗುವ ಸವಲತ್ತುಗಳನ್ನು ನೋಡಿದಾಗ ಹಾಸನ ಜಿಲ್ಲೆಯ ಬಗ್ಗೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಬಜೆಟ್‌ನಲ್ಲಿ ಆಗುವ ಘೋಷಣೆಗಳೇ ಕಡಿಮೆ. ಅದರಲ್ಲೂ ಅವುಗಳ ಅನುಷ್ಟಾನವಾಗುವುದು ಇನ್ನೂ ವಿರಳ. ಹಾಗೆಯೇ ಕಳೆದ ವರ್ಷದ ಬಜೆಟ್‌ ಇರಲಿ 2023ರಲ್ಲಿ ಆಗಿದ್ದ ಘೋಷಣೆಗಳ ಪೈಕಿಯೇ ಹಲವು ಇನ್ನೂ ಈಡೇರಿಲ್ಲ. ಇಡೀ ಬಜೆಟ್‌ನಲ್ಲಿ ಜಿಲ್ಲೆಯ ಪಾಲಿಗೆ ಘೋಷಣೆಯಾಗಿದ್ದು, ಮೂರೇಮೂರು ಯೋಜನೆಗಳು. ಅವುಗಳ ಪೈಕಿ ಮೊದಲಿನದ್ದರಲ್ಲಿ ಅವರು ಘೊಷಣೆ ಮಾಡಿದ್ದಷ್ಟು ಹಣ ಬಿಡುಗಡೆಯಾಗಿಲ್ಲ. ಇನ್ನು ಉಳಿದ ಎರಡು ಬಜೆಟ್‌ನ ಘೋಷಣೆಗಷ್ಟೇ ಸೀಮಿತವಾಗಿವೆ.
ಹೊಂಡದಲ್ಲಿ ಸಿಲುಕಿದ ಐರಾವತ ಬಸ್
ಬಸ್ ನಿಲ್ದಾಣಕ್ಕೆ ತೆರಳುವ ಮಾರ್ಗದ ಹೊಂಡದಲ್ಲಿ ಸಿಲುಕಿದ ಐರಾವತ ಬಸ್‌ಅನ್ನು ಹೊರ ತೆಗೆಯಲು ಚಾಲಕ ಹಾಗೂ ನಿರ್ವಾಹಕ ಗಂಟೆಗಳ ಕಾಲ ಪರದಾಡಿದರು. ಬುಧವಾರ ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವಾಗ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದ ವೇಳೆ ಹೆದ್ದಾರಿ ಬದಿಯಲ್ಲಿ ನಿರ್ಮಾಣವಾಗಿರುವ ಅಡಿಗಳಷ್ಟು ಆಳದ ಹೊಂಡಕ್ಕೆ ಸಿಲುಕಿ ಒಂದು ಗಂಟೆಗೂ ಹೆಚ್ಚಿನ ಕಾಲ ಪರದಾಡುವಂತಾಗಿತ್ತು.
  • < previous
  • 1
  • ...
  • 188
  • 189
  • 190
  • 191
  • 192
  • 193
  • 194
  • 195
  • 196
  • ...
  • 552
  • next >
Top Stories
ಟಾಕ್ಸಿಕ್‌ನಂಥಾ ಸಿನಿಮಾ ಭಾರತದಲ್ಲೇ ಬಂದಿಲ್ಲ: ರುಕ್ಮಿಣಿ ವಸಂತ್‌
ನಿಮ್ಮ ಮಿನುಗುವ ಮುಖದ ಗುಟ್ಟು ಏನು? : ಮೋದಿಗೆ ಹರ್ಲಿನ್‌ ಪ್ರಶ್ನೆ
ವಿಶ್ವವ್ಯಾಪಿ ಹರಡಿದ ಬಾಯಿ ಕ್ಯಾನ್ಸರ್ : ಭೀಕರ ಖಾಯಿಲೆ ಕಾರಣ, ಲಕ್ಷಣ, ಚಿಕಿತ್ಸೆ ಹೇಗೆ?
ನವೆಂಬರ್‌ಗಲ್ಲ, 2028ಕ್ಕೆ ಕ್ರಾಂತಿ: ಡಿಸಿಎಂ ಡಿಕೆಶಿ
ಗಿಲ್ಲಿ ನಟನ ಕುರಿತು 6 ಇಂಟರೆಸ್ಟಿಂಗ್‌ ಸಂಗತಿಗಳು
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved