ಆಲೂರಿನ ದೇಗುಲಗಳಲ್ಲಿ ವೈಕುಂಠ ಏಕಾದಶಿಕುಂದೂರು ಹೋಬಳಿ ಅಡಿಬೈಲು ಗ್ರಾಮದಲ್ಲಿರುವ ರಂಗನ ಬೆಟ್ಟದಲ್ಲಿನ ಶ್ರೀ ಬಿಂದಿಗಮ್ಮ ರಂಗನಾಥ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ವಿವಿಧ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾದವು. ಮೊದಲಿಗೆ ಸುಪ್ರಭಾತ ಸೇವೆ, ಗುರು ಪರಂಪರ ಅನುಸಂಧಾನ, ಸಂಕಲ್ಪ ವಾಸುದೇವ ಪುಣ್ಯ, ಪಂಚಾಮೃತ ಅಭಿಷೇಕ ನಡೆಸಲಾಯಿತು. ಏಳು ಗಂಟೆಗೆ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಂಗನಾಥ ಸ್ವಾಮಿಯ ಅಡ್ಡ ಪಲ್ಲಕ್ಕಿ ಉತ್ಸವ ನಡೆಸಿ, ವೈಕುಂಠ ದ್ವಾರ ಪ್ರವೇಶ ಪೂಜೆ ನೆರವೇರಿಸಲಾಯಿತು.