ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಇಂದು ಮಕ್ಕಳ ಮೇಲೆ ಸಮಾಜ, ಸಮುದಾಯ, ಹೆತ್ತವರು ಎಲ್ಲರೂ ಅಂಕಗಳಿಗೆ ಹೆಚ್ಚು ಒತ್ತು ನೀಡುತಿದ್ದಾರೆ, ಆದರೆ ಅಂಕಗಳೇ ಸರ್ವಸ್ವವಲ್ಲ. ಮಕ್ಕಳ ಸರ್ವಾಂಗೀಣ ಬೆಳವಣಿಗೆ ಮುಖ್ಯ. ಇಂದಿನ ಹೆತ್ತವರು ಮಾರ್ಕ್ ಮಾರ್ಕ್ ಎಂದು ಎಳವೆಯಲ್ಲಿಯೇ ಕೋಚಿಂಗ್, ಟ್ಯೂಶನ್ ಎಂದು ಅಗತ್ಯವಿಲ್ಲದಿದ್ದರೂ ಎಳೇಯ ಕಂದಮ್ಮಗಳನ್ನು ಆಡಿನಲಿಯುವ ವಯಸ್ಸಲ್ಲಿ ಒತ್ತಡ ಹೇರುತ್ತಿವುದು ಖೇದಕರ. ಮಕ್ಕಳನ್ನು ಮಾರ್ಕ್ ಅಲ್ಲ, ಮುಂದೆ ರೀಮಾರ್ಕ್ ಬಾರದ ಹಾಗೆ ಬೆಳೆಸಿರಿ ಎಂದು ಸಂತ ಲಾರೆನ್ಸ್ ಕಾಲೇಜು ಮೂಡುಬೆಳ್ಳೆ ಇಲ್ಲಿನ ಮಾಜಿ ಪ್ರಾಂಶುಪಾಲೆ ಸರಿತಾ ಆಳ್ವಾ ಕರೆ ನೀಡಿದ್ದಾರೆ.ಇಲ್ಲಿನ ಸಂತೆಕಟ್ಟೆಯ ಮೌಂಟ್ ರೋಸರಿ ಆಂಗ್ಲ ಶಾಲೆಯ ಪ್ರಾಥಮಿಕ ಶಾಲೆಯ ಶಿಕ್ಷಕ ರಕ್ಷಕ ಸಭೆಯಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.ಶಾಲಾ ಸಂಚಾಲಕ ವಂ.ಡಾ. ರಾಕ್ ಡಿ’ಸೋಜ ಮಾತನಾಡಿ ಎಳವೆಯಲ್ಲಿಯೇ ಮಕ್ಕಳಲ್ಲಿ ಮಾನವೀಯತೆ ಮತ್ತು ದೇಶ ಪ್ರೇಮವನ್ನು ಬೆಳೆಸಲು ಕರೆ ನೀಡಿ ಸುತ್ತ ಮುತ್ತ ಹತ್ತು ಹಲವು ಶಾಲೆಗಳಿದ್ದರೂ ನಮ್ಮ ಶಾಲೆಯನ್ನೇ ನಿಮ್ಮ ಕಂದಮ್ಮಗಳ ಗುಣಮಟ್ಟದ ಕಲಿಕೆಗೆ ಮೌಂಟ್ ರೋಸರಿ ವಿದ್ಯಾಸಂಸ್ಥೆಯನ್ನು ಆಯ್ಕೆ ಮಾಡಿದ ಹೆತ್ತವರಿಗೆ ಅಭಿನಂದಿಸಿದರು.
ಸಂಘದ ಕಾರ್ಯದರ್ಶಿ ವನಿತಾ ಫರ್ನಾಂಡಿಸ್ ಕಳೆದ ಸಾಲಿನ ವಾರ್ಷಿಕ ವರದಿಯನ್ನು ಸಭೆಯ ಮುಂದೆ ಇಟ್ಟರು. ಶಾಲಾ ಮುಖ್ಯಶಿಕ್ಷಕಿ ಸಿ.ಆನ್ಸಿಲ್ಲಾ ಡಿಮೆಲ್ಲೊ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಆದ ಹೊಸ ಮಾರ್ಪಾಡುಗಳ ಬಗ್ಗೆ ವಿವರಣೆ ನೀಡಿದರು.೨೦೨೫-೨೬ ನೇ ಸಾಲಿನ ಕಾರ್ಯಕಾರಿ ಸಮಿತಿಗೆ ತರಗತಿವಾರು ಸದಸ್ಯರನ್ನು ಆಯ್ಕೆ ಮಾಡಲಾಯಿತು. ಶಾಲೆಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಿಂದ ವಿಶೇಷ ವರದಿ ಮಂಡನೆ ನಡೆಯಿತು. ಸಂಘದ ಅಧ್ಯಕ್ಷ ನಾಗರಾಜ್ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ಆಲ್ವಿನ್ ದಾಂತಿ ಸ್ವಾಗತಿಸಿದರು. ಶಿಕ್ಷಕಿ ಸುಜಾತ ನಿರೂಪಿಸಿ ಶಿಕ್ಷಕಿ ಸಾರ ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))