ಸಾಮರಸ್ಯ ಬದುಕಿನಿಂದ ಸಾಮಾಜಿಕ ಸ್ವಾಸ್ಥ್ಯ ಪಾಲನೆ: ಡಾ.ಮಂತರ್ ಗೌಡಬಜೆಗುಂಡಿ ಗ್ರಾಮದ ಖಿಳಾರಿಯ ಶಾಫಿ ಜುಮಾ ಮಸೀದಿ ಆಡಳಿತ ಮಂಡಳಿ, ಹಯಾತುಲ್ ಇಸ್ಲಾಂ ಅರೇಬಿಕ್ ಮದರಸ ಆಶ್ರಯದಲ್ಲಿ ಪ್ರವಾದಿ ಜನ್ಮದಿನದ ಕಾರ್ಯಕ್ರಮ ಮಸೀದಿ ಆವರಣದಲ್ಲಿ ನಡೆಯಿತು. ಶಾಸಕ ಡಾ. ಮಂತರ್ ಗೌಡ ಪಾಲ್ಗೊಂಡು ಮಾತನಾಡಿ, ಎಲ್ಲರೂ ಸಾಮರಸ್ಯದಿಂದ ಬದುಕುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವುದರೊಂದಿಗೆ, ಊರಿನ ಅಭಿವೃದ್ಧಿಗೂ ಸಹಕರಿಸಬೇಕಿದೆ ಎಂದರು.