ಪಶ್ಚಿಮ ಘಟ್ಟ ಉಳಿಸಲು ಇಂದು ಸಂಯುಕ್ತ ಹೋರಾಟಕೊಡಗು ಮತ್ತು ಹಾಸನ ಗಡಿ ಭಾಗದ ಪಶ್ಚಿಮ ಘಟ್ಟ ಸಾಲುಗಳಿಗೆ ಸೇರಿದ ಹೊಸಕೋಟೆ ಬೆಟ್ಟದಲ್ಲಿ ಗಣಿಗಾರಿಕೆ ಮಾಡಲು ಅನುಮತಿ ನೀಡಿರುವ ಹಾಸನ ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಪರಿಸರ ಇಲಾಖೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆಯನ್ನು ಶನಿವಾರ ಬೆಳಗ್ಗೆ ೧೦ಕ್ಕೆ ಹೊಸೂರು ಗ್ರಾಮದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಲಾಗಿದೆ.